SK Home Ad
Home ನಮ್ಮ ಜಿಲ್ಲೆ ರಾಯಚೂರು ಗೃಹಿಣಿಯ ಭೀಕರ ಕೊಲೆ: ಶವದ ಮೇಲೆಯೇ ಮಗುವಿಟ್ಟು ಪರಾರಿಯಾದ ಹಂತಕರು!

ಗೃಹಿಣಿಯ ಭೀಕರ ಕೊಲೆ: ಶವದ ಮೇಲೆಯೇ ಮಗುವಿಟ್ಟು ಪರಾರಿಯಾದ ಹಂತಕರು!

0
69

ಸಿಂಧೂನೂರು: ಆರ್‌.ಎಚ್. ಕ್ಯಾಂಪ್ 5ರ ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಗೃಹಿಣಿಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ನಡೆದಿದೆ.

ಕೊಲೆಯಾದ ಮಹಿಳೆ ಆರ್‌.ಎಚ್. ಕ್ಯಾಂಪ್ 4ರ ನಿವಾಸಿ ಸ್ನೇಹಾ (26) ಎಂದು ಗುರುತಿಸಲಾಗಿದೆ. ಹಂತಕರು ಕೃತ್ಯ ಎಸಗಿದ ಬಳಿಕ, ಮಹಿಳೆಯ ಎರಡು ವರ್ಷದ ಹಸುಗೂಸನ್ನು ಆಕೆಯ ಶವದ ಮೇಲೆಯೇ ಕುರಿಸಿ ಪರಾರಿಯಾಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿ ಸ್ಥಳೀಯರು ತೆರಳಿ ನೋಡಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಂತಕರ ಪತ್ತೆಗಾಗಿ ಬಲೆ ಬೀಸಿದ್ದಾರೆ.