Home Advertisement
Home ನಮ್ಮ ಜಿಲ್ಲೆ ಮಂಡ್ಯ ಆದಿಚುಂಚನಗಿರಿಗೆ ಮೋದಿ ಭೇಟಿ: ಭೈರವೈಕ್ಯ ಮಂದಿರ ಉದ್ಘಾಟನೆ

ಆದಿಚುಂಚನಗಿರಿಗೆ ಮೋದಿ ಭೇಟಿ: ಭೈರವೈಕ್ಯ ಮಂದಿರ ಉದ್ಘಾಟನೆ

0
116

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಮಹತ್ವದ ಭೇಟಿ ನೀಡಲಿದ್ದು, ಇದರ ಪೂರ್ವಭಾವಿಯಾಗಿ ಭಾರೀ ಸಿದ್ಧತೆಗಳು ಜೋರಾಗಿ ಸಾಗುತ್ತಿವೆ.

ಈ ಹಿನ್ನೆಲೆದಲ್ಲಿ ಇಂದು ವಿರೋಧ ಪಕ್ಷದ ನಾಯಕ R. ಅಶೋಕ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ಸಿದ್ಧತೆಗಳನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳು ಸಾಕಷ್ಟಿದ್ದಾರೆ. 2028ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಭೇಟಿ ವೇಳೆ, ಆದಿಚುಂಚನಗಿರಿ ಮಠದ 71ನೇ ಪೀಠಾಧಿಪತಿ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆ ಇರುವ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಕುರಿತು ಸ್ವಾಮೀಜಿ ಮಾಹಿತಿ ನೀಡಿದ್ದು, ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡಿವೆ ಎಂದರು.

ಸಾರ್ವಜನಿಕರಿಗೆ ನಿರ್ಬಂಧ: ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಏಪ್ರಿಲ್ 15ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಸಾಮಾನ್ಯ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಭಕ್ತರು ಬೆಳಿಗ್ಗೆ 9 ಗಂಟೆಯೊಳಗೆ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲು ಸೂಚಿಸಲಾಗಿದೆ.

ವಿಶೇಷ ಉಡುಗೊರೆ: ಪ್ರಧಾನಿ ಮೋದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಶೈಲಿಯ ವಿಶೇಷ ಪೇಟವನ್ನು ಉಡುಗೊರೆಯಾಗಿ ನೀಡಲು ಸಿದ್ಧತೆ ನಡೆದಿದೆ. ಈ ಪೇಟವನ್ನು ಕಲಾವಿದ ನಂದನ್ ಸಿಂಗ್ ಅವರು ಮೈಸೂರು ರೇಷ್ಮೆ ಮತ್ತು ಬನಾರಸ್ ಸಿಲ್ಕ್ ಬಳಸಿ 5 ದಿನಗಳಲ್ಲಿ ತಯಾರಿಸಿದ್ದಾರೆ. ಇದರಲ್ಲಿ ಗಂಡುಬೇರುಂಡ ಚಿಹ್ನೆ ಮತ್ತು ಮುತ್ತಿನ ಅಲಂಕಾರವೂ ಇದೆ.