SK Home Ad
Home ಸುದ್ದಿ ವಿದೇಶ ಚುಮ್ಮಾ ಚುಮ್ಮ ದೇ ದೇ.. ಈ ವೈದ್ಯ ದಂಪತಿ 30 ಸೆಕೆಂಡ್‌ಗೆ ಎಷ್ಟು ಕಿಸ್ ಕೊಟ್ಟಿದ್ದಾರೆ...

ಚುಮ್ಮಾ ಚುಮ್ಮ ದೇ ದೇ.. ಈ ವೈದ್ಯ ದಂಪತಿ 30 ಸೆಕೆಂಡ್‌ಗೆ ಎಷ್ಟು ಕಿಸ್ ಕೊಟ್ಟಿದ್ದಾರೆ ಗೊತ್ತಾ?

0
76

ಮುತ್ತೇ ಪ್ರಥಮ ಅದುವೇ ಜಗದ ನಿಯಮ… ಅನ್ನೋ ಹಾಡನ್ನು ಎಲ್ಲರೂ ಕೇಳಿದ್ದೇವೆ ಆದರೆ, ಅದೇ ಮುತ್ತಿನಲ್ಲಿಯೇ ಯುವ ದಂಪತಿ ಗಿನ್ನಿಸ್‌ ರೆಕಾರ್ಡ್‌ ಮಾಡಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಸ್ಟೋರಿ ಇಲ್ಲಿದೆ ನೋಡಿ.

ಕೇವಲ 30 ಸೆಕೆಂಡ್‌ಗಳಲ್ಲಿ ಬರೋಬ್ಬರಿ 195 ಬಾರಿ ಪರಸ್ಪರ ಮುತ್ತು ನೀಡಿ ಬ್ರೆಜಿಲ್‌ನ ವೈದ್ಯ ದಂಪತಿಯೊಂದು ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದೆ. ವಿಶ್ವ ಚುಂಬನ ದಿನದ ಸಂದರ್ಭದಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

ಈ ಸಾಧನೆ ಮಾಡಿದವರು ರೆನಾಟೊ ಬೈಮಾ ಗಯಾ (32) ಮತ್ತು ಅವರ ಗೆಳತಿ ನಯಾರಾ ರೋಬರ್ಟಾ ರಿಬೈರೊ ಡಿ ಮರಿನ್ಸ್ (33). ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿದ್ದು, ಕೋವಿಡ್-19 ಮಹಾಮಾರಿಯ ಸಂದರ್ಭದಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಜೊತೆಯಾಗಿ ಇರುವ ಈ ಜೋಡಿ, “ನಾವೇ ಜಗತ್ತಿನ ಅತ್ಯುತ್ತಮ ಜೋಡಿ” ಎಂಬ ನಂಬಿಕೆಯಿಂದ ಈ ದಾಖಲೆಗೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ಗಿನ್ನೆಸ್ ವಿಶ್ವದಾಖಲೆಗಳ ಪ್ರಕಾರ, ಈ ಸಾಧನೆ 2026ರ ಫೆಬ್ರವರಿ 17ರಂದು ಬ್ರೆಜಿಲ್‌ನ ಸಾವೊ ಜೋಸೆ ದೊಸ್ ಕ್ಯಾಂಪೋಸ್ ನಗರದಲ್ಲಿ ದಾಖಲಾಗಿದ್ದು, 30 ಸೆಕೆಂಡ್‌ಗಳಲ್ಲಿ ಅತಿ ಹೆಚ್ಚು ಮುತ್ತು ನೀಡಿದ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರೆನಾಟೊ ಅವರಿಗೆ ಇದು ಮೊದಲ ಗಿನ್ನೆಸ್ ದಾಖಲೆ ಅಲ್ಲ. ಈ ಹಿಂದೆ ವೇಗವಾಗಿ 10 ಪುಸ್ತಕಗಳನ್ನು ಜೋಡಿಸಿ ಉರುಳಿಸಿದ ದಾಖಲೆ ತಮ್ಮ ಹೆಸರಿಗೆ ಬರೆದಿದ್ದಾರೆ. ಈ ಬಾರಿ ತಮ್ಮ ಸಂಗಾತಿಯೊಂದಿಗೆ ಸೇರಿ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಈ ಸವಾಲು ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ.

ಇದೀಗ ಈ ಜೋಡಿ ಮತ್ತೊಂದು ವಿಶ್ವದಾಖಲೆಯತ್ತ ಕಣ್ಣಿಟ್ಟಿದೆ. ಒಂದು ನಿಮಿಷದಲ್ಲಿ ಅತಿ ಹೆಚ್ಚು ಮುತ್ತು ನೀಡುವ ದಾಖಲೆ ಮುರಿಯುವ ಗುರಿ ಹೊಂದಿದ್ದು, ಪ್ರಸ್ತುತ ಈ ದಾಖಲೆ ಜಪಾನ್‌ನ ಜೋಡಿಯ ಹೆಸರಿನಲ್ಲಿ 277 ಮುತ್ತುಗಳು ಎಂಬ ಸಾಧನೆಯೊಂದಿಗೆ ದಾಖಲಾಗಿದೆ. ಅದನ್ನು ಮುರಿಯಲು ಸಿದ್ಧತೆ ನಡೆಸುತ್ತಿರುವುದಾಗಿ ವೈದ್ಯ ದಂಪತಿ ಹೇಳಿದ್ದಾರೆ.