SK Home Ad
Home ಸುದ್ದಿ ದೇಶ E20 ಇಂಧನ: ಮೋದಿ ಭೇಟಿಗೂ ಮುನ್ನ ಅಭಿಯಾನ ಆರಂಭಿಸಿದ ಕೇಜ್ರಿ

E20 ಇಂಧನ: ಮೋದಿ ಭೇಟಿಗೂ ಮುನ್ನ ಅಭಿಯಾನ ಆರಂಭಿಸಿದ ಕೇಜ್ರಿ

0
67

E20 ಪೆಟ್ರೋಲ್ ಕುರಿತು ಜನರ ಅಹವಾಲು ಆಲಿಸಿ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪತ್ರ

ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಎಥೆನಾಲ್ ಮಿಶ್ರಿತ E20 ಪೆಟ್ರೋಲ್ ಅನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

2023ಕ್ಕೂ ಮೊದಲು ತಯಾರಿಸಲಾದ ಕಾರುಗಳು ಮತ್ತು ದ್ವಿಚಕ್ರ ವಾಹನಗಳು E20 ಇಂಧನಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಿಲ್ಲ. ಹೀಗಾಗಿ ಈ ಇಂಧನ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ, ಎಂಜಿನ್ ಬೇಗ ಸವೆದು ಹೋಗುತ್ತಿದೆ ಹಾಗೂ ವಾಹನ ಮಾಲೀಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಕೇಜ್ರಿವಾಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ವಾಂಗ್‌ಚುಕ್ ಬೆಂಬಲಕ್ಕೆ ನಿಂತ ‘3 Idiots’ ಚತುರ್: Video ವೈರಲ್!

ಶುದ್ಧ ಪೆಟ್ರೋಲ್ ಆಯ್ಕೆಗೆ ಒತ್ತಾಯ : ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಶುದ್ಧ ಪೆಟ್ರೋಲ್ ಮತ್ತು E20 ಮಿಶ್ರಿತ ಇಂಧನದ ನಡುವೆ ಆಯ್ಕೆ ಮಾಡುವ ಅವಕಾಶ ನೀಡಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ. E20 ಇಂಧನದ ಕ್ಯಾಲೋರಿಫಿಕ್ ಮೌಲ್ಯ ಕಡಿಮೆ ಇರುವುದರಿಂದ ವಾಹನಗಳ ಮೈಲೇಜ್ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ E20 ಪೆಟ್ರೋಲ್ ಬೆಲೆಯಲ್ಲೂ ಕಡಿತ ಮಾಡಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಧಾನಿಗೆ ಪತ್ರ ಬರೆದಿರುವ ಕೇಜ್ರಿವಾಲ್ ಅದಕ್ಕೂ ಮುನ್ನ ನಾಗರಿಕರಿಗೆ E20 ವಿರುದ್ಧ ಧ್ವನಿ ಎತ್ತೋಣ ಎಂದು ಹೇಳಿದ್ದಾರೆ.ನಿಮ್ಮ ಅನುಭವಗಳನ್ನು ಅವರೊಂದಿಗೆ ಪ್ರದಾನಿ ಅವರೊಂದಿಗೆ ಹಂಚಿಕೊಳ್ಳಿ https://stope20petrol.com/ ಎಂದು ಲಿಂಕ್‌ ನೀಡಿದ್ದಾರೆ

ಇದನ್ನೂ ಓದಿ: TET ಪರೀಕ್ಷೆಯ ಹೊಸ ದಿನಾಂಕ ಘೋಷಣೆಗೆ ರಾಹುಲ್ ಆಗ್ರಹ

ಪ್ರಧಾನಿ ಭೇಟಿಗೆ ಸಮಯ ಕೋರಿಕೆ : ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, “E20 ಇಂಧನದ ಬೆಲೆಯನ್ನು ಕಡಿಮೆ ಮಾಡುವಂತೆ ನಾನು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದೇನೆ. ಈ ಇಂಧನ ಕಡಿಮೆ ಮೈಲೇಜ್ ನೀಡುವುದರಿಂದ ಅದರ ಬೆಲೆಯೂ ಕಡಿಮೆಯಾಗಬೇಕು. ಈ ವಿಚಾರವಾಗಿ ಚರ್ಚಿಸಲು ಪ್ರಧಾನಿ ಅವರನ್ನು ಭೇಟಿಯಾಗಲು ಅಪಾಯಿಂಟ್‌ಮೆಂಟ್‌ ಕೂಡ ಕೇಳಿದ್ದೇನೆ” ಎಂದು ಹೇಳಿದರು.

ಜನರು ಧ್ವನಿ ಎತ್ತಬೇಕು : E20 ಪೆಟ್ರೋಲ್‌ನಿಂದ ಸಮಸ್ಯೆ ಎದುರಿಸುತ್ತಿರುವವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ. “ಈ ಸರ್ಕಾರ ನಮ್ಮ ಮಾತನ್ನು ಸುಲಭವಾಗಿ ಕೇಳುವುದಿಲ್ಲ. ಆದ್ದರಿಂದ ಸಮಸ್ಯೆ ಎದುರಿಸುತ್ತಿರುವ ಪ್ರತಿಯೊಬ್ಬರೂ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು,” ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: ಶಾಲೆಯಲ್ಲೇ AI ಶಿಕ್ಷಣ: Google ಸಮಾವೇಶದಲ್ಲಿ CM ಮಾಸ್ಟರ್ ಪ್ಲಾನ್!

ಪೆಟ್ರೋಲ್ ಬಂಕ್ ಮತ್ತು ಸರ್ವಿಸ್ ಸೆಂಟರ್‌ಗೆ ಭೇಟಿ : ಶನಿವಾರ ಕೇಜ್ರಿವಾಲ್ ದೆಹಲಿಯ ಪೆಟ್ರೋಲ್ ಬಂಕ್ ಹಾಗೂ ಸರ್ವಿಸ್ ಸ್ಟೇಷನ್‌ಗೆ ಭೇಟಿ ನೀಡಿ ವಾಹನ ಮಾಲೀಕರೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಅನೇಕ ವಾಹನ ಮಾಲೀಕರು E20 ಪೆಟ್ರೋಲ್ ಬಳಕೆಯ ನಂತರ ತಮ್ಮ ವಾಹನಗಳ ಮೈಲೇಜ್ ಕುಸಿದಿದೆ ಹಾಗೂ ಯಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎಂದು ದೂರಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.

ಸರ್ಕಾರದ ವಿರುದ್ಧ ವಾಗ್ದಾಳಿ : E20 ಇಂಧನವನ್ನು ವಿರೋಧಿಸುವವರನ್ನು ಸರ್ಕಾರದ ಕೆಲವು ಸಚಿವರು ದೇಶದ್ರೋಹಿಗಳು, ಪೆಟ್ರೋಲ್ ಲಾಬಿಯ ಏಜೆಂಟ್‌ಗಳು ಎಂದು ಕರೆಯುತ್ತಿರುವುದು ಸರಿಯಲ್ಲ ಎಂದು ಕೇಜ್ರಿವಾಲ್ ಆರೋಪಿಸಿದರು. “E20 ಪೆಟ್ರೋಲ್ ಬಗ್ಗೆ ಕಳವಳ ವ್ಯಕ್ತಪಡಿಸುವವರು ದೇಶದ್ರೋಹಿಗಳಲ್ಲ. ಅವರು ದೇಶಭಕ್ತರು. ಅವರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವುದು ಸರ್ಕಾರದ ಕರ್ತವ್ಯ,” ಎಂದು ಪ್ರಧಾನಿ ಮೋದಿ ಅವರಿಗೆ ಉದ್ದೇಶಿಸಿ ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ: ರಾಜ್ಯಾದ್ಯಂತ 10 ಸಾವಿರ ಯುವ ಸಂಘ ಸ್ಥಾಪನೆ: ಪ್ರತಿ ಸಂಘಕ್ಕೆ ₹10 ಲಕ್ಷ

E20 ಇಂಧನದ ಕುರಿತು ಚರ್ಚೆ ತೀವ್ರ : ದೇಶದಲ್ಲಿ ಹಂತ ಹಂತವಾಗಿ ಎಥೆನಾಲ್ ಮಿಶ್ರಿತ ಇಂಧನ ಬಳಕೆಯನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ನೀತಿಯ ನಡುವೆ, E20 ಪೆಟ್ರೋಲ್ ಕುರಿತು ಕೇಜ್ರಿವಾಲ್ ಎತ್ತಿರುವ ಪ್ರಶ್ನೆಗಳು ಹೊಸ ಚರ್ಚೆಗೆ ಕಾರಣವಾಗಿವೆ. ಹಳೆಯ ವಾಹನಗಳ ಮೇಲೆ ಈ ಇಂಧನದ ಪರಿಣಾಮ, ಮೈಲೇಜ್ ಕುಸಿತ ಮತ್ತು ನಿರ್ವಹಣಾ ವೆಚ್ಚದ ಬಗ್ಗೆ ಈಗಾಗಲೇ ಹಲವು ವಾಹನ ಮಾಲೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.