SK Home Ad
Home ನಮ್ಮ ಜಿಲ್ಲೆ ಮಂಡ್ಯ ಜೆಡಿಎಸ್ ಶಾಸಕರಿಂದ ಹೆತ್ತ ಮಕ್ಕಳಿಗೆ ವಿಷ ಹಾಕುವ ಕೆಲಸ

ಜೆಡಿಎಸ್ ಶಾಸಕರಿಂದ ಹೆತ್ತ ಮಕ್ಕಳಿಗೆ ವಿಷ ಹಾಕುವ ಕೆಲಸ

0
25

ಕೆ.ಆರ್. ಪೇಟೆ: ವಿಧಾನ ಸಭೆಯಿಂದ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್ ಶಾಸಕರು ಹೆತ್ತ ಮಕ್ಕಳಿಗೆ ವಿಷ ಹಾಕುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಹೆಚ್.ಟಿ. ಮಂಜು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಸ್ವ-ಪಕ್ಷ ಜೆಡಿಎಸ್ ಶಾಸಕರ ವಿರುದ್ಧ ಕಿಡಿಕಾರಿದ ಮಂಜು, ಅಡ್ಡಮತದಾನ ಮಾಡಿದವರು ಜೆಡಿಎಸ್ ಪಕ್ಷಕ್ಕೆ, ಕುಮಾರಣ್ಣಂಗೆ ಅಲ್ಲ ಅವರ ಮಕ್ಕಳು, ಕುಟುಂಬಕ್ಕೆ ವಿಷ ಹಾಕುವ ಕೆಲಸ ಮಾಡಿದ್ದಾರೆ ಎಂದರು.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆತ್ಮಾಲೋಕನ ಸಭೆ ನಡೆಸಿದಾಗ ಮಾಜಿ ಸಚಿವ ಜಿ.ಟಿ. ದೇವೇಗೌಡರನ್ನು ಹೊರತುಪಡಿಸಿ ಉಳಿದ 17 ಜನ ಶಾಸಕರು ಬಂದಿದ್ದರು. ಆದರೆ, ಆ ಸಭೆಗೆ ಅಡ್ಡ ಮತದಾನ ಮಾಡಿ ಆದ್ಯಾವ ಮನಸ್ಥಿತಿ, ಮುಖ ಹೊತ್ಕೊಂಡು ಬಂದಿದ್ದರೊ ಗೊತ್ತಿಲ್ಲ ಎಂದು ಟೀಕಿಸಿದರು.

ಜೆಡಿಎಸ್‌ನ 18 ಶಾಸಕರಲ್ಲಿ ಮೂವರು ಕ್ರಾಸ್‌ವೋಟ್ ಮಾಡಿರಲೇಬೇಕು. ಅವರಿಗೆ ಆತ್ಮಸಾಕ್ಷಿ ಇದೆಯೋ, ಅವರ ನಡವಳಿಕೆನೇ ಹಂಗೇನೋ ಗೊತ್ತಿಲ್ಲ. ಅವರು 100ಕ್ಕೆ 100 ರಷ್ಟು ಹೆತ್ತ ಮಕ್ಕಳಿಗ ವಿಷ ಹಾಕುವ ಕೆಲಸ ಮಾಡಿದ್ದಾರೆ. ಆ ಕೆಲಸವನ್ನು ನಿಷ್ಠಾವಂತ ಶಾಸಕನಾಗಿ ನಾನು ಉಗ್ರವಾಗಿ ಖಂಡಿಸುತ್ತೇನೆ. ಮತ್ತೆ ಇದೇ ರೀತಿ ಪುನರಾವರ್ತನೆ ಆಗದಂತೆ ಮಾಹಿತಿ ತೆಗೆದುಕೊಂಡು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಜೆಡಿಎಸ್ ವರಿಷ್ಠರಲ್ಲಿ ಮನವಿ ಮಾಡಿದರು.