SK Home Ad
Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ ಜೈಲು ಅಧೀಕ್ಷಕ ರಾಕೇಶ ಕಾಂಬಳೆ ಅಮಾನತು

ಕಲಬುರಗಿ ಜೈಲು ಅಧೀಕ್ಷಕ ರಾಕೇಶ ಕಾಂಬಳೆ ಅಮಾನತು

0
390

ಕಲಬುರಗಿ: ಕಲಬುರಗಿ ಕೇಂದ್ರ ಅಧೀಕ್ಷಕ ರಾಕೇಶ ಕಾಂಬಳೆ ಅವರನ್ನು ಅಮಾನತು ಮಾಡಿ ಬಂಧಿಖಾನೆ ಎಡಿಜಿಪಿ ಅಲೋಕಕುಮಾರ ಆದೇಶ ಹೊರಡಿಸಿದ್ದಾರೆ.

ಕೂಡಲೇ ಕಲಬುರಗಿ ಜೈಲ್ ಅಧಿಕ್ಷಕರಾಗಿ ಅಧಿಕಾರ ವಹಿಸಿಕೊಳ್ಳಲು ಕೃಷ್ಣಕುಮಾರಗೆ ಸೂಚನೆ ನೀಡಿರುವ ಬಗ್ಗೆ ಬಂಧಿಖಾನೆ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಇಂದು ರಾತ್ರಿಯೊಳಗೆ ಅಥವಾ ನಾಳೆ ಬೆಳಿಗ್ಗೆ ಕೃಷ್ಣಕುಮಾರ ಅಧಿಕಾರವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ನಂಬಲಾರ್ಹ ಮೂಲಗಳು ತಿಳಿಸಿವೆ.

ನಗರ ಪೊಲೀಸ್ ಆಯುಕ್ತ ಭೇಟಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾರಾಗೃಹಕ್ಕೆ ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ SD ಭೇಟಿ ನೀಡಿದ್ದಾರೆ.

ಜೈಲಿನ ಕಾಂಪೌಂಡ್ ಗೋಡೆ ಹಾರಿ ಮೂವರು ಕೈದಿಗಳು ಪರಾರಿಯಾಗಿದ್ದು, ಜೈಲಿನ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಇಂಚಿಂಚು ಮಾಹಿತಿ ಪಡೆದಿದ್ದಾರೆ. ಕೈದಿಗಳ ಪತ್ತೆಗೆ ತೀವ್ರ ಹುಡುಕಾಟ ನಡೆಸಿದ್ದಾರೆ.