Home Advertisement
Home ನಮ್ಮ ಜಿಲ್ಲೆ ಕಲಬುರಗಿ ಸಿದ್ದೇಶ್ವರ ಎಕ್ಸ್‌ಪ್ರೆಸ್ ರೈಲಲ್ಲಿ ದರೋಡೆಗೆ ಯತ್ನ: 9 ಬಂಧನ

ಸಿದ್ದೇಶ್ವರ ಎಕ್ಸ್‌ಪ್ರೆಸ್ ರೈಲಲ್ಲಿ ದರೋಡೆಗೆ ಯತ್ನ: 9 ಬಂಧನ

0
3

ಕಲಬುರಗಿ: ಸಿದ್ದೇಶ್ವರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದರೋಡೆ ಯತ್ನವನ್ನು ಕೇಂದ್ರ ರೈಲ್ವೆ ಆರ್‌ಪಿಎಫ್ ತಂಡವು ವಿಫಲಗೊಳಿಸಿ 9 ಮಹಿಳಾ ಅಪರಾಧಿಗಳನ್ನು ಬಂಧಿಸಿದೆ.

ಬುಧವಾರ ಕುರ್ಡುವಾಡಿ ನಿಲ್ದಾಣದಲ್ಲಿ ಕರ್ತವ್ಯ ದಲ್ಲಿದ್ದ ಅಪರಾಧ ತಡೆ ಮತ್ತು ಪತ್ತೆ ದಳ (ಸಿಪಿಡಿಎಸ್) ತಂಡದ ಹೆಡ್ ಕಾನ್‌ಸ್ಟೆಬಲ್ 3 ಮಹಿಳೆಯರು ಅನುಮಾನಾಸ್ಪದ ರೀತಿಯಲ್ಲಿ ಚಲಿ ಸುತ್ತಿರುವುದನ್ನು ಗಮನಿಸಿ ನಿಲ್ದಾಣ ದಿಂದ ಹೊರಹೋಗುವಂತೆ ಎಚ್ಚರಿಕೆ ನೀಡಿ ಬಿಡಲಾಯಿತು.

ಈ ಮಹಿಳೆಯರು ಲಾತೂರ್ ಎಕ್ಸ್‌ಪ್ರೆಸ್ ಹತ್ತುವುದನ್ನು ಗಮನಿಸಿ ಸೋಲಾಪುರ ತಂಡಕ್ಕೆ ವಿಭಾಗದಾದ್ಯಂತ ಹೈ ಅಲರ್ಟ್ ಪ್ರಾರಂಭಿಸಲು ತಿಳಿಸಲಾಯಿತು. ಜೇವೂರ್ ನಿಲ್ದಾಣದಲ್ಲಿ ಶಂಕಿತರನ್ನು ತಡೆಹಿಡಿಯಲಾಯಿತು.