ಕಲಬುರಗಿ: ಜೈಲಿನ ಬ್ಯಾರಕ್ ಕಂಬಿಗಳನ್ನ ಕಟ್ ಮಾಡಿ ಸೆಂಟ್ರಲ್ ಜೈಲಿನಿಂದ ಎಸ್ಕೇಪ್ ಆಗಿದ್ದ ಮೂವರು ಸಜಾ ಕೈದಿಗಳಲ್ಲಿ ಓರ್ವ ಕೈದಿ ಸಂತೋಷ ಮೇಲೆ ಬುಧವಾರ ಬೆಳಗ್ಗೆ ನಗರ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ಸಂತಾಪುರ ಗ್ರಾಮದ ಪೋಸ್ಕೋ ಕೇಸ್ ನಡಿ ಸಜಾ ಬಂದಿ ಸಂತೋಷ ಬಸಪ್ಪ ಮೇತ್ರೆ ಎಂಬ ಕೈದಿ ಮೇಲೆ ಫೈರಿಂಗ್ ಮಾಡಿ ಬಂಧಿಸಲಾಗಿದೆ. ಜಿಲ್ಲಾ ಆಸ್ಪತ್ರೆ ಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರ ಹೊರವಲಯದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಕಾಲಿಗೆ ಗುಂಡು ಹೊಡೆದು ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಮೂಲಕ ಎಸ್ಕೇಪ್ ಆಗಿದ್ದರು.
ಸಜಾ ಬಂಧಿಗಳು ಎಸ್ಕೇಪ್ ಆಗೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬಿಂದಾಸ್ ಆಗಿ ನಡೆದುಕೊಂಡು ಹೋಗಿ ಕಾರ್ ಹತ್ತಿದ್ದ ಆರೋಪಿಗಳು, ಅಲ್ಲಿಂದ ಬೀದರ್ ಕಡೆಗೆ ಏಸ್ಕೇಪ್ ಆಗಿದ್ದಾರೆ.






















