SK Home Ad
Home ನಮ್ಮ ಜಿಲ್ಲೆ ರಾಜ್ಯದಲ್ಲಿ ಯಾವಾಗ ಬೇಕಿದ್ದರೂ ಚುನಾವಣೆ ಬರಬಹುದು

ರಾಜ್ಯದಲ್ಲಿ ಯಾವಾಗ ಬೇಕಿದ್ದರೂ ಚುನಾವಣೆ ಬರಬಹುದು

0
71

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದಲ್ಲಿ ಅತೃಪ್ತ ಆತ್ಮಗಳಿವೆ. ಅವುಗಳನ್ನು ತೃಪ್ತಿಗೊಳಿಸಲು ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿಗಳ ಕೈಯಲ್ಲಿ ಹಾಗೂ ರಾಜ್ಯಾಧ್ಯಕ್ಷರ ಕೈಯಲ್ಲಿ ಸಾಧ್ಯವಿಲ್ಲ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ರಾಮಲಿಂಗಾ ರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇದು ಸರ್ಕಾದ ಮೊದಲನೇ ವಿಕೆಟ್‌ಗೆ ಸೀಮಿತ ಅಲ್ಲ. ಸರ್ಕಾರದಲ್ಲಿ ಹಲವು ಅತೃಪ್ತ ಆತ್ಮಗಳಿವೆ ಎಂದರು.

ರಾಜೀನಾಮೆ ನೀಡಿರುವುದು ರಾಮಲಿಂಗಾರೆಡ್ಡಿ ಅವರ ವೈಯಕ್ತಿಕ ತಿರ್ಮಾನ. ಇದರ ಹಿಂದೆ ಯಾರು ಇದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಇದರ ಮೂಲಕ ಸರ್ಕಾರ ಪತನ ಆಗುತ್ತದೆ. ಪೂರ್ಣ ಎರಡು ವರ್ಷ ಇರುತ್ತದೆ ಎಂಬ ನಂಬಿಕೆ ನನಗಿಲ್ಲ ಎಂದಿದ್ದಾರೆ.

ಎಲ್ಲ ಹಿಂದುತ್ವವಾದಿಗಳು ಜಾಗೃತವಾಗಬೇಕು. ಯಾವಾಗ ಬೇಕಿದ್ದರೂ ಚುನಾವಣೆ ಬರಬಹುದು. ಹಿಂದುತ್ವದ ಹಿನ್ನೆಲೆ ಇರುವ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.