ಹುಬ್ಬಳ್ಳಿ: ನೈಋತ್ಯ ರೈಲ್ವೆ ವ್ಯಾಪ್ತಿಯ 6 ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಹೊಸ ಸಮಯ ಜುಲೈ 25 ರಿಂದ ಹಂತಹಂತವಾಗಿ ಜಾರಿಗೆ ಬರಲಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಜೋಧಪುರ-ಕೆಎಸ್‌ಆರ್ ಬೆಂಗಳೂರು ದ್ವಿ-ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20693 ಜುಲೈ 25ರಿಂದ ಘಟಪ್ರಭಾ ನಿಲ್ದಾಣಕ್ಕೆ 08.28ಕ್ಕೆ ಆಗಮಿಸಿ 08.30ಕ್ಕೆ ಹೊರಡಲಿದೆ. ಈ ಹಿಂದೆ 08.43ಕ್ಕೆ ಬರುತ್ತಿತ್ತು. ಬೆಳಗಾವಿ ನಿಲ್ದಾಣಕ್ಕೆ ಈ ರೈಲು 09.35ಕ್ಕೆ ಆಗಮಿಸಿ 09.40ಕ್ಕೆ ನಿರ್ಗಮಿಸಲಿದೆ.
ಕೆಎಸ್‌ಆರ್ ಬೆಂಗಳೂರು-ಗಾಂಧಿಧಾಮ್ ಸಾಪ್ತಾಹಿಕ ಸೂಪರ್‌ಫಾಸ್ಟ್ ರೈಲು ಸಂಖ್ಯೆ 20686 ಜುಲೈ 25ರಿಂದ ಬೆಳಗಾವಿಗೆ 09.35ಕ್ಕೆ ಬಂದು 09.40ಕ್ಕೆ ಹೊರಡಲಿದೆ. ಈ ಹಿಂದೆ 10.05ಕ್ಕೆ ಆಗಮಿಸುತ್ತಿತ್ತು.
ಅಜ್ಮೀರ್-ಮೈಸೂರು ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ 16209 ಜುಲೈ 26ರಿಂದ, ಅಜ್ಮೀರ್-ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ 16531 ಜುಲೈ 27ರಿಂದ ಮತ್ತು ಜೋಧಪುರ-ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ 16533 ಜುಲೈ 29ರಿಂದ ಬೆಳಗಾವಿ ನಿಲ್ದಾಣಕ್ಕೆ 09.35ಕ್ಕೆ ಆಗಮಿಸಿ 09.40ಕ್ಕೆ ಹೊರಡಲಿವೆ. ಈ ಮೂರು ರೈಲುಗಳು ಈ ಹಿಂದೆ 09.45ಕ್ಕೆ ಬೆಳಗಾವಿ ತಲುಪುತ್ತಿದ್ದವು.
ಪುಣೆ-ಎರ್ನಾಕುಲಂ ಸಾಪ್ತಾಹಿಕ ಎಕ್ಸ್‌ಪ್ರೆಸ್ 11097 ಜುಲೈ 25ರಿಂದ ಲೋಂಡಾ ನಿಲ್ದಾಣಕ್ಕೆ 08.20ಕ್ಕೆ ಆಗಮಿಸಿ 08.30ಕ್ಕೆ ನಿರ್ಗಮಿಸಲಿದೆ. ಈ ಮೊದಲು 07.58ಕ್ಕೆ ಬರುತ್ತಿತ್ತು.
ಪರಿಷ್ಕರಣೆಯಿಂದ ಬೆಳಗಾವಿ ಮಾರ್ಗದ 5 ರೈಲುಗಳು 09.35ಕ್ಕೆ ಬೆಳಗಾವಿ ನಿಲ್ದಾಣದಲ್ಲಿ ಇರಲಿವೆ. ಪ್ರಯಾಣಿಕರು ಹೊಸ ವೇಳಾಪಟ್ಟಿ ಗಮನಿಸಿ ಪ್ರಯಾಣಿಸಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ.





















