SK Home Ad
Home ನಮ್ಮ ಜಿಲ್ಲೆ ಧಾರವಾಡ ದೇಶವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ಷಡ್ಯಂತ್ರ

ದೇಶವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ಷಡ್ಯಂತ್ರ

0
3

ಧಾರವಾಡ: ಕಾಂಗ್ರೆಸ್ ಪಕ್ಷ ತುಷ್ಟೀಕರಣದ ಪರಾಕಾಷ್ಠೆ ತಲುಪಿದೆ. ಮತ್ತೊಮ್ಮೆ ದೇಶವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಆರೋಪ ಮಾಡಿದರು.

ಮಾಧ್ಯಮದವರೊಂದಿಗೆ ಮಾತನಾಡಿ, `ವಂದೇ ಮಾತರಂ ಗೀತೆ’ಯನ್ನು ತುಂಡರಿಸಲು ಯತ್ನ ನಡೆದಿದೆ. 1937ರ ಮೊದಲು 1913, 1917, 1921ರಲ್ಲಿ ಅಖಿಲ ಭಾರತದ ಕಾಂಗ್ರೆಸ್ ಅಧ್ಯಕ್ಷರು ಮುಸಲ್ಮಾನರಿದ್ದರು ಆಗ ವಂದೇ ಮಾತರಂ ಹಾಡಲಾಗಿದೆ. ಯಾರ ಆಕ್ಷೇಪವೂ ಇರಲಿಲ್ಲ. ಆದರೆ, ಮುಂದೆ ಜಿನ್ನಾನ ತುಷ್ಟೀಕರಣದ ಕಾರಣದಿಂದಾಗಿ ವಂದೇ ಮಾತರಂ ತುಂಡು ಮಾಡಲಾಯಿತು. ಕಾಂಗ್ರೆಸ್ ಮಾನಸಿಕತೆ ಈಗಲೂ ಬದಲಾಗಿಲ್ಲ. ವಂದೇ ಮಾತರಂ ತುಂಡು ಮಾಡುವ ಮೂಲಕ ಮತ್ತೆ ದೇಶವನ್ನು ತುಂಡರಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಆರೋಪ ಮಾಡಿದರು.

ಐತಿಹಾಸಿಕ ತಪ್ಪು ಸರಿಪಡಿಸಿಕೊಂಡು ದೇಶದ ಸಂವಿಧಾನದ ಮೂಲಕ ಮಾಡಲಾದ ಕಾನೂನಿಗೆ ಗೌರವ ನೀಡುವುದನ್ನು ಬಿಟ್ಟು ತುಷ್ಟೀಕರಣದ ರಾಜಕಾರಣಕ್ಕಾಗಿ ವಂದೇ ಮಾತರಂ ತುಂಡರಿಸಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ವಂದೇ ಮಾತರಂ ಘೋಷಣೆ ಮೂಲಕ ನೇಣಿಗೆ ಕೊರಳೊಡ್ಡಿದ ಸ್ವಾತಂತ್ರ್ಯ ಯೋಧರಿಗೆ ಮಾಡಿದ ಅಪಮಾನ ಇದಾಗಿದೆ ಎಂದರು.

ರಾಹುಲ್ ಗಾಂಧಿ ಹೈಡ್ರಾಮಾ: ವಂದೇ ಮಾತರಂ ಕುರಿತು ಕಾಂಗ್ರೆಸ್ ತೆಗೆದುಕೊಂಡ ನಿರ್ಣಯಕ್ಕೆ ಜನವಿರೋಧ ವ್ಯಕ್ತವಾಗಿದ್ದರಿಂದ ರಾಹುಲ್ ಗಾಂಧಿ ಪೊಲೀಸ್ ಠಾಣೆ ಮುಂದೆ ಹೋಗಿ ಡ್ರಾಮಾ ಮಾಡಿದ್ದಾರೆ. ಇದು ಜನರ ಗಮನ ಬೇರೆಡೆ ಸೆಳೆಯುವ ತಂತ್ರವಾಗಿದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ನಾಗೇಂದ್ರ ಅವರನ್ನು ಕೂಡಲೇ ಸಂಪುಟದಿಂದ ಹೊರಹಾಕಬೇಕು ಎಂದು ಒತ್ತಾಯ ಮಾಡಿದರು.