SK Home Ad
Home ಸುದ್ದಿ ದೇಶ ರೇಪ್ ಕೇಸ್ ಮುಚ್ಚಿ ಹಾಕಲು 5 ಕೋಟಿ ಕೇಳಿದ ಸಿಎಂ ಪತ್ನಿ!

ರೇಪ್ ಕೇಸ್ ಮುಚ್ಚಿ ಹಾಕಲು 5 ಕೋಟಿ ಕೇಳಿದ ಸಿಎಂ ಪತ್ನಿ!

0
5

ಚಂಡೀಗಢ: ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರ ಪತ್ನಿ ಗುರುಪ್ರೀತ್ ಕೌರ್ 5 ಕೋಟಿ ರೂ. ಕೇಳಿದ್ದಾರೆ ಎಂದು ಪಂಜಾಬ್-ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರಂಜಿತ್ ಸಿಂಗ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ದೂರುದಾರರೊಬ್ಬರು ನ್ಯಾಯಾಲಯದ ಗಮನಕ್ಕೆ ತಂದ ನಂತರ ಆಗಸ್ಟ್ 21ರ ಕೋರ್ಟ್ ನಡಾವಳಿಯಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸಿ 2 ವಾರಗಳೊಳಗೆ ಕ್ರಮ ಕೈಗೊಂಡಿರುವ ವರದಿ ಸಲ್ಲಿಸುವಂತೆ ಪಂಜಾಬ್ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದೆ.

5 ಕೋಟಿ ರೂ. ನೀಡಿದ್ದಲ್ಲಿ ಅತ್ಯಾಚಾರದ ಪ್ರಕರಣ ಮುಚ್ಚಿ ಹಾಕುವುದಾಗಿ ಗುರುಪ್ರೀತ್ ಕೌರ್ ಹೇಳಿದ್ದರೆಂದು ಎನ್‌ಎಚ್‌ಆರ್‌ಸಿ ಸದಸ್ಯ ಕನೂಂಗೋ ವಿವರಿಸಿದ್ದಾರೆ. ಈ ವಿಷಯವನ್ನು ಕೇಂದ್ರ ಗೃಹ ಸಚಿವಾಲಯದ ಗಮನಕ್ಕೂ ತಂದಿರುವುದಾಗಿ ಎನ್‌ಎಚ್‌ಆರ್‌ಸಿ ತಿಳಿಸಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಂದ ವರದಿ ಬಂದ ಬಳಿಕ ತನಿಖೆ ಮುಂದುವರಿಸುವುದಾಗಿ ಕನೂಂಗೋ ಹೇಳಿದ್ದಾರೆ. ಒತ್ತಡ ಹೇರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.