SK Home Ad
Home ನಮ್ಮ ಜಿಲ್ಲೆ ಧಾರವಾಡ ಗಣೇಶ ವಿಸರ್ಜನೆಗೆ ಪೊಲೀಸರ ಮಾರ್ಗಸೂಚಿ; ಡಿಜೆ ಪೈಪೋಟಿ ಬೇಡ, ಶಾಂತಿ ಕಾಪಾಡಿ

ಗಣೇಶ ವಿಸರ್ಜನೆಗೆ ಪೊಲೀಸರ ಮಾರ್ಗಸೂಚಿ; ಡಿಜೆ ಪೈಪೋಟಿ ಬೇಡ, ಶಾಂತಿ ಕಾಪಾಡಿ

0
37

ಹುಬ್ಬಳ್ಳಿ: ಇಂದು ಸಂಜೆ 11 ದಿನದ ಸಾರ್ವಜನಿಕ ಗಣೇಶಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತಾಲಯವು ಸಾರ್ವಜನಿಕರಿಗೆ ಮಾರ್ಗಸೂಚಿ ಪ್ರಕಟಿಸಿದೆ.

ವಿಸರ್ಜನಾ ಮೆರವಣಿಗೆ ಮಾರ್ಗದಲ್ಲಿ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳನ್ನೇ ಬಳಸಬೇಕು. ಮಹಿಳೆಯರು, ಹಿರಿಯ ನಾಗರಿಕರು ಮತ್ತು ಚಿಕ್ಕ ಮಕ್ಕಳು ಹೆಚ್ಚು ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಬೇಕು.
ಮೆರವಣಿಗೆಯಲ್ಲಿ ಕುಣಿಯುವಾಗ ಮೊಬೈಲ್ ಕಳೆದುಹೋಗುವ ಪ್ರಕರಣ ಹೆಚ್ಚಾಗುತ್ತಿದ್ದು, ಸಾಧ್ಯವಾದರೆ ಮೊಬೈಲ್ ಮನೆಯಲ್ಲಿಡಿ, ಇಲ್ಲವಾದರೆ ಮುಂಭಾಗದ ಜೇಬಿನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಿ. ಜನಸಂದಣಿಯಲ್ಲಿ ಚಪ್ಪಲಿ ಬದಲು ಶೂ ಧರಿಸುವುದು ಸುರಕ್ಷಿತ ಎಂದು ಪೊಲೀಸರು ತಿಳಿಸಿದ್ದಾರೆ.

ಮೆರವಣಿಗೆ ಅಥವಾ ಡಿಜೆ ನಡುವೆ ಸ್ಪರ್ಧೆ ಬೇಡ, ಶಾಂತಿ-ಸೌಹಾರ್ದ ಕಾಪಾಡಬೇಕು. ವಿಸರ್ಜನಾ ಸ್ಥಳಗಳಲ್ಲಿ ಮಕ್ಕಳನ್ನು ನೀರು ಮತ್ತು ಕ್ರೇನ್‌ಗಳಿಂದ ದೂರವಿಡಬೇಕು.

ಈ ಬಾರಿ ಮೆರವಣಿಗೆ ವೇಳೆ ಆಲ್ಕೋ ಬ್ರೀತ್ ಅನಲೈಸರ್, ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ ಮತ್ತು ನಾರ್ಕೋಟಿಕ್ಸ್ ಅನಲೈಸರ್ ಮೂಲಕ ತಪಾಸಣೆ ನಡೆಸಲಾಗುವುದು. ಸಂಚಾರ ಮತ್ತು ವಿಸರ್ಜನೆ ವೇಳೆ ಪೊಲೀಸರ ಸೂಚನೆ ಪಾಲಿಸಬೇಕು ಎಂದು ಆಯುಕ್ತಾಲಯದ ಪ್ರಕಟಣೆ ತಿಳಿಸಿದೆ.