SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಎಪಿಕೆ ಫೈಲ್ ಕಳುಹಿಸಿ 12 ಲಕ್ಷ ವಂಚನೆ

ಎಪಿಕೆ ಫೈಲ್ ಕಳುಹಿಸಿ 12 ಲಕ್ಷ ವಂಚನೆ

0
72

ದಾವಣಗೆರೆ: ಗ್ಯಾಸ್ ಪೈಪ್‌ಲೈನ್ ಸಂಪರ್ಕ ಕಡಿತಗೊಳಿಸುವ ಬೆದರಿಕೆಯೊಡ್ಡಿ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಆನ್‌ಲೈನ್ ಮೂಲಕ 12,07,688 ವಂಚಿಸಿದ್ದಾರೆ. ನಗರದ ಎಸ್.ಎಸ್. ಲೇಔಟ್ 2ನೇ ಮೇನ್ ‘ಎ’ ಬ್ಲಾಕ್ ನಿವಾಸಿ ವಂಚನೆಗೆ ಒಳಗಾದವರು.

‘ಈಚೆಗೆ ನನ್ನ ವಾಟ್ಸ್ ಆಪ್‌ಗೆ ಅಪರಿಚಿತ ಸಂಖ್ಯೆಯಿಂದ ಮಹಾನಗರ ಪಾಲಿಕೆ ಗ್ಯಾಸ್ ಏಜೆನ್ಸಿ ಹೆಸರಿನಲ್ಲಿ ಸಂದೇಶ ಬಂದಿತ್ತು. ಅದರಲ್ಲಿ ನಮೂದಿಸಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ನಿಮ್ಮ ಗ್ಯಾಸ್ ಪೈಪ್‌ಲೈನ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೇಳಿದ್ದರು. ಅಲ್ಲದೇ ಎಪಿಕೆ ಫೈಲ್ವೊಂದನ್ನು ಕಳಿಸಿದ್ದರು. ಅದನ್ನು ತೆರದಾಗ ಮೊಬೈಲ್‌ಗೆ ಸರಣಿ ಒಟಿಪಿಗಳು ಬಂದವು. ಬಳಿಕ ನನ್ನ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು 12,07,688 ಕಡಿತಗೊಂಡಿತು’ ಎಂದು ಸಂತ್ರಸ್ತ ದೂರು ನೀಡಿದ್ದಾರೆ.

ಈ ಕುರಿತು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಲನ್ ಹೆಸರಲ್ಲಿ 5.49 ಲಕ್ಷ ವಂಚನೆ: ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ ನಿವಾಸಿಯೊಬ್ಬರ ಮೊಬೈಲ್‌ಗೆ ವಾಹನದ ಆರ್‌ಟಿಓ ಚಲನ್ ಹೆಸರಿನಲ್ಲಿ ಎಪಿಕೆ ಫೈಲ್ ಕಳುಹಿಸಿರುವ ವಂಚಕರು 5,49,726 ರೂ. ವಂಚಿಸಿದ್ದಾರೆ.

‘RTO Challan.apk ಎಂಬ ಫೈಲ್ ಬಂದಿತ್ತು. ಇದು ನನ್ನ ದ್ವಿಚಕ್ರ ವಾಹನಕ್ಕೆ ಸಂಬಂಧಿಸಿದ್ದು ಎಂದು ನಂಬಿ ಅದನ್ನು ಓಪನ್ ಮಾಡಿದ್ದೆ. ಅದೇ ದಿನ ಸಂಜೆ ನನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 5,49,726 ಹಣ ಕಡಿತಗೊಂಡಿದೆ. ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಅಪರಿಚಿತರು ಆನ್‌ಲೈನ್ ಮೂಲಕ ವಂಚನೆ ಮಾಡಿರುವುದು ಗೊತ್ತಾಯಿತು ಎಂದು ಹಣ ಕಳೆದುಕೊಂಡ ವ್ಯಕ್ತಿ ದೂರು ನೀಡಿದ್ದಾರೆ. ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.