ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ, ಬೆಳೆಗಳು ಒಣಗುತ್ತಿವೆ: ಸರ್ಕಾರದ ವಿರುದ್ಧ ಕುಮಾರ್ ಬಂಗಾರಪ್ಪ ಕಳವಳ
ದಾವಣಗೆರೆ: ದೇಶದ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಒಂದು ದುರಂತ ಇದ್ದಂತೆ, ಇದು ಬಹಳಷ್ಟು ದಶಕಗಳಿಂದ ನಡೆಯುತ್ತಿದೆ. ಯಾರೇ ತಪ್ಪಿತಸ್ಥರು ಇದ್ದರೂ ಅವರಿಗೆ ತಕ್ಕದಾದ ಶಿಕ್ಷೆ ಆಗಬೇಕು. ಸಂತ್ರಸ್ತರಿಗೆ ಪರಿಹಾರ ಕೊಡುವಂತಾಗಬೇಕು. ಇದು ಹೊಸದಲ್ಲ ಮೊದಲಿನಿಂದ ನಡೆಯುತ್ತಿದೆ. ಸರ್ಕಾರ ಈ ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಿಂಗ್ ಆಪರೇಷನ್ ಬಗ್ಗೆ ಮುಖ್ಯ ಮಂತ್ರಿಗಳು ಹೆಚ್ಚಿನ ಗಮನ ಹರಿಸಬೇಕು. ಅವರವರ ಪಕ್ಷದಲ್ಲೇ ಹಿರಿಯರು ಸೇರಿ ಇದಕ್ಕೆ ಇತಿಶ್ರೀ ಆಡಬೇಕು. ಇಲ್ಲವಾದ್ರೆ ಆ ಪಕ್ಷ ವ್ಯಕ್ತಿ ಕುಟುಂಬಕ್ಕೆ ಕಪ್ಪು ಮಸಿ ಬಳಿದಂತಾಗುತ್ತದೆ. ವಿಷಯ ಕೋರ್ಟ್ನಲ್ಲಿ ಇರುವುದರಿಂದ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಸೀರಿಯಸ್ ಆಗಿ ತನಿಖೆ ಆಗಬೇಕಾದ ಅವಶ್ಯಕತೆ ಇದೆ ಎಂದರು.
ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಬರದ ವಿಚಾರ ಬಿಟ್ಟು ಸ್ಟಿçಂಗ್ ಯಾಕೆ ಮಾತಾಡುತ್ತೇವೆ. ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ ಬೆಳೆ ಒಣಗಿ ಹೋಗುತ್ತಿವೆ. ಸ್ಟಿಂಗ್ಗಿAತ ಬರ ಸೀರಿಯಸ್ ವಿಚಾರ ಅದರ ಬಗ್ಗೆ ಗಮನ ಕೊಡಬೇಕು. ಕೇಂದ್ರಕ್ಕೆ ರಾಜ್ಯ ಸರ್ಕಾರ ಈ ಕೂಡಲೇ ಬರದ ಬಗ್ಗೆ ವರದಿ ಸಲ್ಲಿಸಿ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.
ನದಿ ಜೋಡಣೆ ಕಾರ್ಯವಾಗಲಿ : ಈ ಬಾರಿ ಅಡಿಕೆ, ತೆಂಗು ಸೇರಿದಂತೆ ಇತರೆ ಬೆಳೆಗಳ ಬೆಲೆ ಕುಸಿತ ಕಂಡರೆ ಸುಧಾರಿಸಿಕೊಳ್ಳಲು ಇನ್ನೂ ಹತ್ತು ವರ್ಷ ಬೇಕಾಗುತ್ತೆ. ನದಿ ಜೋಡಣೆ ಮಾಡುವ ಅವಶ್ಯಕತೆ ಇದೆ. ಕೆರೆಗಳಲ್ಲಿನ ಹೂಳು ತೆಗೆಸಿ ಕೆರೆ ತುಂಬಿಸುವ ಯೋಜನೆಗಳನ್ನು ಸರ್ಕಾರ ಸಕಾರಗೊಳಿಸಬೇಕು. ಇಲ್ಲದಿದ್ರೆ ಯಾವ ರಾಜ್ಯನು ಉದ್ಧಾರ ಆಗುವುದಿಲ್ಲ. ಬರದಲ್ಲೇ ಒದ್ದಾಡಬೇಕಾಗುತ್ತದೆ ಎಂದರು.
ಬಿಜೆಪಿಗೆ ಯತ್ನಾಳ್ ಬಂದ್ರೇ ಒಳ್ಳೆಯದೇ : ಇತ್ತೀಚೆಗಷ್ಟೇ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆಗೆ ನಿಂತು ಮಾತನಾಡುವ ಪೋಟೋ ವೈರಲ್ ಆಗಿದೆ. ನಾನು ಫೋಟೋ ನೋಡಿದೆ ಒಳ್ಳೆಯದು, ಎಲ್ಲರೂ ಒಂದಾದ್ರೆ ಪಕ್ಷಕ್ಕೆ ಒಳ್ಳೆಯದು ತಾನೇ. ದೆಹಲಿ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ನಾನೇನು ಮಾತನಾಡುವುದಿಲ್ಲ. ವರಿಷ್ಟರು ಎಲ್ಲವನ್ನು ನೋಡುತ್ತಿರುತ್ತಾರೆ ಎಂದರು.
ರಾಜಕೀಯ ನಾಯಕರು ಈ ಪಕ್ಷದಿಂದ ಆ ಪಕ್ಷಕ್ಕೆ ಹೋಗ್ತಾರೆ ಎಂದು ವದಂತಿ ಇರುವುದು ಸಾಮಾನ್ಯ. ನಾನು ಬಿಜೆಪಿಯಲ್ಲಿ ಇದ್ದೇನೆ. ಮುಂದೆಯೂ ಇಲ್ಲೇ ಇರುತ್ತೇನೆ ಎಂದು ಹೇಳಿದರು.
- ಕಬ್ಬು ರೈತರ ಹೋರಾಟಕ್ಕೆ ತಾತ್ಕಾಲಿಕ ವಿರಾಮ: ಮತ್ತೆ ಕೇಂದ್ರಕ್ಕೆ ಡೆಡ್ಲೈನ್
- ಸ್ಟಿಂಗ್ ಆಪರೇಷನ್ಗಿಂತ ಬರದ ಸಮಸ್ಯೆ ಗಂಭೀರ: ಯತ್ನಾಳ್-ವಿಜಯೇಂದ್ರ ಒಂದಾದರೆ ಒಳ್ಳೆಯದು
- ಕಬ್ಬು ರೈತರ ಪರ ಡಿಕೆಶಿ ಬ್ಯಾಟಿಂಗ್: ಪ್ರಧಾನಿ ಮೋದಿಗೆ ಪತ್ರ, 5 ಪ್ರಮುಖ ಬೇಡಿಕೆಗಳೇನು?
- ಸನ್ನಿ ಡಿಯೋಲ್ ಹೊಸ ಅವತಾರದ ‘ಸೂರ್ಯಾ’ ಟೀಸರ್ ಬಿಡುಗಡೆ
- ಒಪಿಎಸ್ ಮರುಜಾರಿಗೆ ಸರ್ಕಾರ ಬದ್ಧ: ಬಸವರಾಜ ಗುರಿಕಾರ






















