Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ: ದಕ್ಷಿಣವೇ ಟಾರ್ಗೆಟ್‌? PID ಕ್ರಮದ ಹಿಂದೆ ರಾಜಕೀಯ ನೆರಳು!

ಬೆಳಗಾವಿ: ದಕ್ಷಿಣವೇ ಟಾರ್ಗೆಟ್‌? PID ಕ್ರಮದ ಹಿಂದೆ ರಾಜಕೀಯ ನೆರಳು!

0
115

ಬೆಳಗಾವಿ: ಬಾಂಡ್‌ ಆಧಾರಿತ ಪಿಐಡಿಗಳಿಗೆ ಬ್ರೇಕ್‌ ಹಾಕುವ ಹೆಸರಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ದಕ್ಷಿಣ ವಲಯದಲ್ಲಿ 31 ಪಿಐಡಿಗಳನ್ನು ರದ್ದುಪಡಿಸಿರುವುದು ಈಗ ಆಡಳಿತಾತ್ಮಕ ಕ್ರಮಕ್ಕಿಂತ ಹೆಚ್ಚು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಪ್ರಶ್ನೆ ಸರಳವಾಗಿದೆ: ಬಾಂಡ್‌ ಆಧಾರಿತ ಪಿಐಡಿಗಳು ದಕ್ಷಿಣದಲ್ಲೇ ಮಾತ್ರವೇ ಇವೆ? ಉತ್ತರ ಭಾಗದಲ್ಲಿ ಇಂತಹ ಪ್ರಕರಣಗಳಿಲ್ಲವೇ? ಇದ್ದರೆ ಅವುಗಳ ಮೇಲೆ ಪಾಲಿಕೆ ಮೌನ ಏಕೆ?

ಜನರಿಗೆ ತೊಂದರೆ ಉಂಟು ಮಾಡುವ ಯಾವುದೇ ಕ್ರಮ ದಕ್ಷಿಣದಿಂದಲೇ ಆರಂಭವಾಗುತ್ತದೆ. ಉತ್ತರದಲ್ಲಿ ಮಾತ್ರ ‘ಬಾರಾ ಕೂನ್ ಮಾಫ್’ ಎಂಬ ಭಾವನೆ ನಾಗರಿಕರಲ್ಲಿ ಬಲವಾಗುತ್ತಿದೆ. ಶಾಸಕ ಅಭಯ ಪಾಟೀಲರ ಜನಪ್ರಿಯತೆಯನ್ನು ಕುಗ್ಗಿಸಲು ಆಡಳಿತಾತ್ಮಕ ಕ್ರಮಗಳ ಹೆಸರಿನಲ್ಲಿ ದಕ್ಷಿಣದ ಜನರ ಮೇಲೆ ಒತ್ತಡ ತರುವ ವ್ಯವಸ್ಥಿತ ಹುನ್ನಾರವೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಪಾಲಿಕೆ ಚುಕ್ಕಾಣಿ ಹಿಡಿದವರೂ ಈ ಸೂಕ್ಷ್ಮತೆಯನ್ನು ಅರಿತಿದ್ದರೂ ಮೌನವಾಗಿರುವುದು ಅಚ್ಚರಿಯ ಸಂಗತಿ. ಪಿಐಡಿ ಎಂದರೆ ಕೇವಲ ಸಂಖ್ಯೆ ಅಲ್ಲ. ಅದು ಆಸ್ತಿ ಹಕ್ಕು, ತೆರಿಗೆ, ಬ್ಯಾಂಕ್ ವ್ಯವಹಾರಗಳೊಂದಿಗೆ ನೇರವಾಗಿ ಸಂಬಂಧಿಸಿದೆ.

ಆಯುಕ್ತರು ದಕ್ಷಿಣದಲ್ಲಿ ಮಾತ್ರವಲ್ಲ, ಉತ್ತರ–ದಕ್ಷಿಣದ ಎಲ್ಲ ಬಾಂಡ್‌ ಪಿಐಡಿಗಳ ಪಟ್ಟಿಯನ್ನು ಬಹಿರಂಗಪಡಿಸಿ ಸಮಗ್ರ ತಪಾಸಣೆ ನಡೆಸಬೇಕು. ಇಲ್ಲದಿದ್ದರೆ, ಈ ಕ್ರಮ ‘ದಾಖಲೆ ಶುದ್ಧೀಕರಣ’ವಲ್ಲ, ‘ದಕ್ಷಿಣ ಟಾರ್ಗೆಟ್’ ಎಂಬ ಆರೋಪಕ್ಕೆ ಇನ್ನಷ್ಟು ಬಲ ಸಿಗಲಿದೆ.