SK Home Ad
Home ನಮ್ಮ ಜಿಲ್ಲೆ ಧಾರವಾಡ `ಹುಬ್ಬಳ್ಳಿ-ರಾಮೇಶ್ವರಂ’ ವಿಶೇಷ ರೈಲು ಸೇವೆ ವಿಸ್ತರಣೆ

`ಹುಬ್ಬಳ್ಳಿ-ರಾಮೇಶ್ವರಂ’ ವಿಶೇಷ ರೈಲು ಸೇವೆ ವಿಸ್ತರಣೆ

0
23

ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ರೈಲ್ವೆ ಮಂಡಳಿಯು `ಹುಬ್ಬಳ್ಳಿ- ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್’ ರೈಲುಗಳ ಸೇವೆ ವಿಸ್ತರಿಸಿದೆ.

ವಿಸ್ತರಿಸಿದ ದಿನಾಂಕಗಳು ಹುಬ್ಬಳ್ಳಿ- ರಾಮೇಶ್ವರಂ ರೈಲು (ರೈಲು ಸಂಖ್ಯೆ- 07355) ಆಗಸ್ಟ್ 2 ರಿಂದ ಆಗಸ್ಟ್ 30ರವರೆಗೆ ಹಾಗೂ ರಾಮೇಶ್ವರಂ- ಹುಬ್ಬಳ್ಳಿ ಎಕ್ಸಪ್ರೆಸ್ ರೈಲು (ರೈಲು ಸಂಖ್ಯೆ- 07356) ಆಗಸ್ಟ್ 3 ರಿಂದ ಆಗಸ್ಟ್ 31 ರವರೆಗೆ ರೈಲುಗಳು ಮೊದಲಿನಂತೆಯೇ ಅದೇ ಸಮಯ, ಅದೇ ನಿಲುಗಡೆಗಳು ಮತ್ತು ಬೋಗಿಗಳೊಂದಿಗೆ ಹೆಚ್ಚುವರಿಯಾಗಿ 5 ಟ್ರಿಪ್ ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.