Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಢೋಂಗಿ ಶಾಸಕರ ನಕಲಿ ರಾಜಕಾರಣ ನಡೆಯದು

ಢೋಂಗಿ ಶಾಸಕರ ನಕಲಿ ರಾಜಕಾರಣ ನಡೆಯದು

0
361

8 ವರ್ಷದವರೆಗೆ ಮಹಿಷವಾಡಗಿ ಸೇತುವೆ ವಿಳಂಬಕ್ಕೆ ಸವದಿಯೇ ಕಾರಣ-ಕೊಣ್ಣೂರ

ಬಾಗಲಕೋಟೆ (ರಬಕವಿ-ಬನಹಟ್ಟಿ) : ಹಲವು ವರ್ಷಗಳಿಂದ ವಿಳಂಬವಾಗಿದ್ದ ಮಹಿಷವಾಡಗಿ ಸೇತುವೆ ಕಾಮಗಾರಿ ಇದೀಗ ರಾಜಕೀಯ ಕಾದಾಟದ ಕೇಂದ್ರಬಿಂದುವಾಗಿ ಪರಿಣಮಿಸಿದ್ದು, ಕಾಮಗಾರಿಯ ವೇಗವೂ ಏಕಾಏಕಿ ಹೆಚ್ಚಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ರಬಕವಿಯಲ್ಲಿ ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಸತ್ಯಾಗ್ರಹ ನಡೆಸಲಾಗಿತ್ತು. ಅದರ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಸಾರ್ವಜನಿಕ ವಾಗ್ವಾದ ತೀವ್ರಗೊಂಡಿದ್ದು, ನಂತರ ಕಾಮಗಾರಿ ದ್ವಿಗುಣ ವೇಗದಲ್ಲಿ ಸಾಗುತ್ತಿರುವುದು ಗಮನ ಸೆಳೆದಿದೆ.

ಇದನ್ನೂ ಓದಿ: 5 ದಿನ ಬ್ಯಾಂಕ್ ಬಂದ್ ಸಾಧ್ಯತೆ – ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ

ಶುಕ್ರವಾರ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಹಿಷವಾಡಗಿ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಸಿದ್ದು ಸವದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “2017ರಿಂದಲೇ ಈ ಸೇತುವೆ ಕಾಮಗಾರಿ ಪ್ರಾರಂಭವಾಗಬೇಕಿತ್ತು. ಆದರೆ ಕಾಮಗಾರಿಗೆ ವೇಗ ಸಿಗದೇ ಇರುವುದಕ್ಕೆ ಶಾಸಕ ಸಿದ್ದು ಸವದಿಯವರ ನಿರ್ಲಕ್ಷ್ಯವೇ ಕಾರಣ” ಎಂದು ಆರೋಪಿಸಿದರು.

ಜನರ ಒತ್ತಡದಿಂದ ಕಾಮಗಾರಿ ವೇಗ: ರಬಕವಿ-ಬನಹಟ್ಟಿಯ ನಾಗರಿಕರು, ವಿಶೇಷವಾಗಿ ರಾಮಣ್ಣ ಹುಲಕುಂದ ನೇತೃತ್ವದಲ್ಲಿ ನಡೆದ ಒತ್ತಡ ಮತ್ತು ಹೋರಾಟದ ಬಳಿಕವೇ ಸರ್ಕಾರ ಹಾಗೂ ಸಚಿವರು ಈ ಕಾಮಗಾರಿಗೆ ಗಮನ ಹರಿಸಿದ್ದಾರೆ ಎಂದು ಸಿದ್ದು ಕೊಣ್ಣೂರ ಹೇಳಿದರು.

ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ

ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಆರ್.ಬಿ. ತಿಮ್ಮಾಪೂರ ಅವರ ನೇತೃತ್ವದಲ್ಲಿ ಹೆಚ್ಚುವರಿ ₹10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಒಟ್ಟು ಕಾಮಗಾರಿಯ ಮೊತ್ತ ₹55 ಕೋಟಿಗೆ ಏರಿಕೆಯಾಗಿ, ಕಾಮಗಾರಿಗೆ ಹೊಸ ಚೈತನ್ಯ ಬಂದಿದೆ ಎಂದು ಹೇಳಿದರು.

“ಕಾರ್ಯವೂ ಇಲ್ಲ, ಹೋರಾಟವೂ ಇಲ್ಲ”: ಶಾಸಕ ಸಿದ್ದು ಸವದಿ ವಿರುದ್ಧ ಮತ್ತಷ್ಟು ಟೀಕಿಸಿದ ಅವರು, “ಮಹಿಷವಾಡಗಿ ಸೇತುವೆ ಕಾಮಗಾರಿ ವೇಗಗೊಳಿಸಲು ಅವರ ಕೊಡುಗೆ ಶೂನ್ಯ. ಯಾವುದೇ ಹೋರಾಟ ನಡೆಸಿಲ್ಲ, ಅಭಿವೃದ್ಧಿ ಕಾರ್ಯದಲ್ಲೂ ಪಾತ್ರವಹಿಸಿಲ್ಲ” ಎಂದು ಆರೋಪಿಸಿದರು.

ಇದನ್ನೂ ಓದಿ: KEA ಮಹತ್ವದ ಸೂಚನೆ: CBSE, CISCE ವಿದ್ಯಾರ್ಥಿಗಳಿಗೆ ಅಂಕ ದೃಢೀಕರಣ ಅವಕಾಶ

ಈ ಬೆಳವಣಿಗೆ ಸ್ಥಳೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸೇತುವೆ ಕಾಮಗಾರಿ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗುತ್ತಿದೆ.

ಸ್ಥಳೀಯರ ಪ್ರಕಾರ, ಸೇತುವೆ ಕಾಮಗಾರಿ ಪೂರ್ಣಗೊಂಡರೆ ರಬಕವಿ-ಬನಹಟ್ಟಿ ಭಾಗದ ಜನರಿಗೆ ಸಂಚಾರ ಸುಲಭವಾಗುವುದರ ಜೊತೆಗೆ ವ್ಯಾಪಾರ ಹಾಗೂ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಲಿದೆ. ಹೀಗಾಗಿ ಸಾರ್ವಜನಿಕರು ಕಾಮಗಾರಿ ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ.