SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಬೇಜವಾಬ್ದಾರಿಯ ಪರಮಾವಧಿ: ಸರ್ಕಾರಿ ಶಾಲೆಯ ಗೇಟ್ ಮುರಿದು ಬಿದ್ದು ವಿದ್ಯಾರ್ಥಿನಿಗೆ ತೀವ್ರ ಗಾಯ

ಬೇಜವಾಬ್ದಾರಿಯ ಪರಮಾವಧಿ: ಸರ್ಕಾರಿ ಶಾಲೆಯ ಗೇಟ್ ಮುರಿದು ಬಿದ್ದು ವಿದ್ಯಾರ್ಥಿನಿಗೆ ತೀವ್ರ ಗಾಯ

0
101

ಬಾಗಲಕೋಟೆ: ಸರ್ಕಾರಿ ಶಾಲೆಯ ಮುಖ್ಯದ್ವಾರದ ಗೇಟ್ ಬಿದ್ದು ಬಾಲಕಿಯೋರ್ವಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಳಕಲ್ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ನಡೆದಿದೆ.

ಒಟ್ಟು ನಾಲ್ಕು ವಿದ್ಯಾರ್ಥಿಗಳು ಹಾಗೂ ಓರ್ವ ಆಯಾ ಮೇಲೆ ಗೇಟ್ ಬಿದ್ದಿದೆ. ರಾಜಸ್ತಾನ ಮೂಲದ ಬಾಲಕಿ ಸುನೇಮಾ ತೀವ್ರವಾಗಿ ಗಾಯಗೊಂಡಿದ್ದಾಳೆ. ಬಾಲಕಿಯನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ‌ ಹೆಚ್ಚಿನ ಚಿಕಿತ್ಸೆಗಾಗಿ ಕರೆತರಲಾಗಿದೆ.

ಬಾಲಕಿ ಮೂಗಿಗೆ ಬಲವಾದ ಪೆಟ್ಟು ಬಿದ್ದಿದ್ದು,‌ ಕಿವಿಯಿಂದಲೂ ರಕ್ತಸ್ರಾವವಾಗಿದೆ ಎಂದು ತಿಳಿದು ಬಂದಿದೆ. ಶಾಲೆ ಪ್ರವೇಶ ದ್ವಾರಕ್ಕೆ ಮೂರು ವರ್ಷಗಳ ಹಿಂದೆ ಕಮಾನ್ ನಿರ್ಮಿಸಲಾಗಿದ್ದು, ಮೂರು ಬಾರಿ ಗೇಟ್ ಮುರಿದು ಬಿದ್ದಿದೆ.

15 ‌ದಿನಗಳ ಹಿಂದಷ್ಟೇ ಗೇಟ್ ಬಿದ್ದಾಗಲೂ ಅಪಾಯ ತಪ್ಪಿತ್ತು. ಕಳಪೆ ಕಾಮಗಾರಿಯೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.