SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಭಗವಾನ ವಿರುದ್ಧ ಉಗ್ರಪ್ಪ ಉಗ್ರರೂಪ

ಭಗವಾನ ವಿರುದ್ಧ ಉಗ್ರಪ್ಪ ಉಗ್ರರೂಪ

0
96

ಬಾಗಲಕೋಟೆ: ಶ್ರೀರಾಮ, ರಾಮಾಯಣ ಹಾಗೂ ಮಹರ್ಷಿ ವಾಲ್ಮೀಕಿ ಅವರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವ ಕೆ.ಎಸ್. ಭಗವಾನ ವಿರುದ್ಧ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು.

ನಾನು ನಿರಂತರವಾಗಿ ರಾಮಾಯಣ, ಮಹಾಭಾರತ ಓದುತ್ತೇನೆ. ನನಗೆ ಅದರಲ್ಲಿ ಆಸಕ್ತಿಯಿದೆ. ಸಾವಿರಾರು ವರ್ಷದ ಇತಿಹಾಸ ಅದಕ್ಕೆ ಇದೆ. ಈ ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರು ಓದಿರೋದಿಲ್ಲ, ಅಧ್ಯಯನ ಮಾಡಿರೋದಿಲ್ಲ. ಸುಖಾಸುಮ್ಮನೆ ಟೀಕೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ವಯಸ್ಸಿನ ಕಾರಣವೋ ಏನೋ ಗೊತ್ತಿಲ್ಲ. ಕೆ.ಎಸ್. ಭಗವಾನ ಹೇಳಿಕೆಗಳಿಗೆ ಪ್ರತಿಕ್ರಿಯಿಸಬಾರದು ಎಂದುಕೊಂಡಿರುತ್ತೇನೆ. ಕೂಡಲೇ ಅವರು ಕ್ಷಮೆಯಾಚಿಸಬೇಕು. ಗಾಂಧೀಜಿ ಅವರು ಗಾಂಧಿ ರಾಜ್ಯವನ್ನು ಬಯಸಿರಲಿಲ್ಲ. ಅವರು ರಾಮರಾಜ್ಯ ಬಯಸಿದ್ದರು. ಅಷ್ಟರ ಮಟ್ಟಿಗೆ ರಾಮಾಯಣ ಪ್ರಭಾವ ಬೀರಿದೆ. ನಮ್ಮ ಭಾವನೆಗಳಿಗೆ ಧಕ್ಕೆ ಮಾಡಿರುವ ಭಗವಾನ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.