SK Home Ad
Home ನಮ್ಮ ಜಿಲ್ಲೆ ಯಾದಗಿರಿ ಸಚಿವ ಸ್ಥಾನ ಸಿಗದಿದ್ದರೆ ನನಗೇನೂ ಬೇಸರವಿಲ್ಲ

ಸಚಿವ ಸ್ಥಾನ ಸಿಗದಿದ್ದರೆ ನನಗೇನೂ ಬೇಸರವಿಲ್ಲ

0
302

ಶಹಾಪುರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಚಿವ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕರೆ ಸಂತೋಷ, ಸಿಗದಿದ್ದರೆ ಬೇಸರವಿಲ್ಲ. ಬದ್ಧತೆಯ ರಾಜಕಾರಣಿ ಎಂದು ಹೆಸರು ಪಡೆದು, ಅಭಿವೃದ್ಧಿಯ ಕಾಳಜಿ ಹೊಂದಿರುವ ನಾನು ಕ್ಷೇತ್ರದ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸುತ್ತೇನೆ ಎಂದು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಸಚಿವ ಸ್ಥಾನ ನಿರ್ವಹಿಸಿದ ಸಂತೃಪ್ತಿ ಇದೆ. ಯಾವುದಕ್ಕೂ ಲಾಬಿ ಮಾಡುವ ಜಾಯಮಾನದವನಲ್ಲ. ನಮಗಿಂತಲೂ ಹಿರಿಯರಿಗೆ ಈ ಹಿಂದೆ ಅವಕಾಶ ಸಿಕ್ಕಿಲ್ಲ. ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನು ಅಳಿದು ತೂಗಿ ನೋಡುತ್ತಿದೆ. ಸದಾ ಕಾಲ ಕಾಂಗ್ರೆಸ್ ಪಕ್ಷದ ಹಿತದೃಷ್ಟಿ ತಾಲೂಕಿನ ಅಭಿವೃದ್ಧಿಗೆ ನಮ್ಮ ಕಾರ್ಯಬದ್ಧತೆ ಎಂದು ಹೇಳಿದರು.