SK Home Ad
Home ನಮ್ಮ ಜಿಲ್ಲೆ ಯಾದಗಿರಿ ಹೆಂಡತಿ ಜತೆ ಕಿರಿಕ್​: ಮಕ್ಕಳನ್ನೇ ಕ್ಯಾನಲ್‌ಗೆ ಎಸೆದ ಪಾಪಿ ತಂದೆ

ಹೆಂಡತಿ ಜತೆ ಕಿರಿಕ್​: ಮಕ್ಕಳನ್ನೇ ಕ್ಯಾನಲ್‌ಗೆ ಎಸೆದ ಪಾಪಿ ತಂದೆ

0
86

ಶಹಾಪುರ: ಹೆಂಡತಿ ಜೊತೆ ಜಗಳ ಮಾಡಿಕೊಂಡ ಕೋಪದಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಗೋಗಿ ಬಳಿ ಇರುವ ಕ್ಯಾನಲ್‌ಗೆ ಎಸೆದಿರುವ ಆಘಾತಕಾರಿ ಘಟನೆ ತಾಲೂಕಿನ ಗಂಗನಾಳ್ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಶಾಂತಪ್ಪ ಎಂಬ ಪಾಪಿ ತಂದೆಯಿಂದ ಈ ಕೃತ್ಯ ನಡೆದಿದೆ. ಸಾನ್ವಿ (9), ಸೃಜನ್ (2) ವರ್ಷದ ಮಕ್ಕಳೇ ಕ್ಯಾನಲ್‌ನ ಪಾಲಾಗಿದ್ದಾರೆ. ರೇಣುಕಾ ಗಂಡ ಶಾಂತಪ್ಪ ಬಿರೆದಾರ್ ದಂಪತಿಗಳಿಗೆ ಮೂರು ಜನ ಮಕ್ಕಳಿದ್ದು, ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳು, ಎರಡು ವರ್ಷದ ಒಂದು ಗಂಡು ಮಗುವಿದೆ.

ತಂದೆ ಶಾಂತಪ್ಪನು ಮೂಲತ ಶಹಾಪುರ ತಾಲೂಕಿನ ಕಕ್ಕಸಗೇರ ಗ್ರಾಮದವನಾಗಿದ್ದು, ಹೆಂಡತಿಯ ತವರೂರು ಗಂಗನಾಳ್ ಗ್ರಾಮದಲ್ಲಿಯೇ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಂಗಳವಾರ ಸಂಜೆ ವೇಳೆ ಗಂಡ ಹೆಂಡತಿ ನಡುವೆ ಕಲಹ ಉಂಟಾಗಿದ್ದು, ಏಕಾಏಕಿ ಮೂವರು ಮಕ್ಕಳನ್ನು ತನ್ನ ದ್ವಿಚಕ್ರ ವಾಹನದ ಮೇಲೆ ಕೂರಿಸಿಕೊಂಡು ಹೋಗಿ ಇಬ್ಬರು ಮಕ್ಕಳನ್ನು ಕ್ಯಾನಲ್‌ಗೆ ಎಸೆದಿದ್ದೇನೆ ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.

ಇನ್ನೋರ್ವ ಮಗಳನ್ನು ತಾಯಿ ಆಶ್ರಯಕ್ಕೆ ಒಪ್ಪಿಸಲಾಗಿದೆ, ಈಗಾಗಲೇ ಶೋಧ ಕಾರ್ಯ ನಡೆದಿದೆ. ಮತ್ತು ನಾಪತ್ತೆಯಡಿ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.