SK Home Ad
Home ಕ್ರೀಡೆ ಪ್ರೇಮಾನಂದ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ ವಿರಾಟ್‌-ಅನುಷ್ಕಾ

ಪ್ರೇಮಾನಂದ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ ವಿರಾಟ್‌-ಅನುಷ್ಕಾ

0
74

ಮಥುರಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದ ಬೆನ್ನಲ್ಲೇ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಅವರು ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ವೃಂದಾವನದಲ್ಲಿರುವ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ ಸ್ಟಾರ್‌ ದಂಪತಿ ಕೆಲ ಸಮಯವನ್ನು ಆಶ್ರಮದಲ್ಲಿಯೇ ಕಳೆದಿದ್ದಾರೆ. ಈ ವೇಳೆ ಮಹಾರಾಜರು ದಂಪತಿಗೆ ಪ್ರವಚನ ಮಾಡಿದ್ದು, ವಿರಾಟ್‌ ಕೈಗೆ ಭಗವದ್ಗೀತೆಯನ್ನು ನೀಡಿದ್ದಾರೆ.

ಈ ಕುರಿತಂತೆ ವಿರಾಟ್‌ ಮತ್ತು ಅನುಷ್ಕಾ ದಂಪತಿ ಆಶ್ರಮಕ್ಕೆ ಭೇಟಿ ನೀಡಿದ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಇದೇ ಮೊದಲಲ್ಲ: ವಿರಾಟ್‌ ಮತ್ತು ಅನುಷ್ಕಾ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ್ದು, ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಅವರು ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಕೊಹ್ಲಿ ಫಾರ್ಮ್‌ ಕಳೆದುಕೊಂಡಾಗ ಮಹಾರಾಜ್‌ ಭೇಟಿ ಮಾಡಿದ್ದರು. ಆ ಬಳಿಕ ಅವರು ಮತ್ತೆ ಫಾರ್ಮ್‌ಗೆ ಮರಳಿದ್ದಲ್ಲದೇ, ಶತಕಗಳನ್ನು ಸಿಡಿಸಿದರು. ಅಂದಿನಿಂದ ಮಹಾರಾಜರ ಮೇಲಿನ ಭಕ್ತಿ ಮತ್ತಷ್ಟು ಗಟ್ಟಿ ಆಯಿತು ಎನ್ನಲಾಗಿದೆ.