SK Home Ad
Home ಕ್ರೀಡೆ ಹಿಟ್‌ಮ್ಯಾನ್ ಹೊಸ ಮೈಲಿಗಲ್ಲು: ODI ರನ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನ

ಹಿಟ್‌ಮ್ಯಾನ್ ಹೊಸ ಮೈಲಿಗಲ್ಲು: ODI ರನ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನ

0
38

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟ್‌ನಿಂದ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದರೂ, ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ಹೆಸರಿಗೆ ಮತ್ತೊಂದು ಐತಿಹಾಸಿಕ ದಾಖಲೆಯನ್ನು ಸೇರಿಸಿಕೊಂಡಿದ್ದಾರೆ.

ಎರಡನೇ ಏಕದಿನ ಪಂದ್ಯದಲ್ಲಿ 26 ರನ್ ಗಳಿಸುವ ಮೂಲಕ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಅವರನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೇರಿದ್ದಾರೆ.

ಪ್ರಸ್ತುತ ರೋಹಿತ್ ಶರ್ಮಾ 287 ಪಂದ್ಯಗಳಲ್ಲಿ 279 ಇನ್ನಿಂಗ್ಸ್‌ಗಳಿಂದ 11,757 ರನ್ ಕಲೆಹಾಕಿದ್ದು, ಅವರ ಸರಾಸರಿ 48.58 ಹಾಗೂ ಸ್ಟ್ರೈಕ್ ರೇಟ್ 92.76 ಆಗಿದೆ. ಇದುವರೆಗೆ ಅವರು 33 ಶತಕ ಮತ್ತು 62 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 264, ಇದು ಏಕದಿನ ಕ್ರಿಕೆಟ್‌ನಲ್ಲೇ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.

ಇನ್ನು ಇಂಜಮಾಮ್-ಉಲ್-ಹಕ್ ತಮ್ಮ ವೃತ್ತಿಜೀವನದಲ್ಲಿ 378 ಪಂದ್ಯಗಳಿಂದ 11,739 ರನ್ ಗಳಿಸಿ ಈವರೆಗೆ 7ನೇ ಸ್ಥಾನದಲ್ಲಿದ್ದರು. ರೋಹಿತ್ ಅವರ ದಾಖಲೆಯನ್ನು ಹಿಂದಿಕ್ಕುವ ಮೂಲಕ ಮತ್ತೊಂದು ದಾಖಲೆಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿದರು.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-10 ಆಟಗಾರರು:

  1. ಸಚಿನ್ ತೆಂಡೂಲ್ಕರ್ (ಭಾರತ) – 18,426
  2. ವಿರಾಟ್ ಕೊಹ್ಲಿ (ಭಾರತ) – 14,846*
  3. ಕುಮಾರ ಸಂಗಕ್ಕಾರ (ಶ್ರೀಲಂಕಾ) – 14,234
  4. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) – 13,704
  5. ಸನತ್ ಜಯಸೂರ್ಯ (ಶ್ರೀಲಂಕಾ) – 13,430
  6. ಮಹೇಲ ಜಯವರ್ಧನೆ (ಶ್ರೀಲಂಕಾ) – 12,650
  7. ರೋಹಿತ್ ಶರ್ಮಾ (ಭಾರತ) – 11,757*
  8. ಇಂಜಮಾಮ್-ಉಲ್-ಹಕ್ (ಪಾಕಿಸ್ತಾನ) – 11,739
  9. ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) – 11,579
  10. ಸೌರವ್ ಗಂಗೂಲಿ (ಭಾರತ) – 11,363