SK Home Ad
Home ನಮ್ಮ ಜಿಲ್ಲೆ ದಾವಣಗೆರೆ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ಪ್ರಾಣಾಪಾಯದಿಂದ ಚಾಲಕ ಪಾರು

ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ಪ್ರಾಣಾಪಾಯದಿಂದ ಚಾಲಕ ಪಾರು

0
43

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದ ಘಟನೆ ತಾಲೂಕಿನ ಹದಡಿ ಗ್ರಾಮದ ಕೆರೆಯಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ದಾವಣಗೆರೆ ಎಂಸಿಸಿ ‘ಬಿ’ ಬ್ಲಾಕ್‌ನ ನಿವಾಸಿ ಎನ್ನಲಾದ ಕೆ.ಪಿ. ಕಿರಣ್‌ಕುಮಾರ್ ಎಂಬುವರು ತ್ಯಾವಣಿಗಿ ಗ್ರಾಮದಿಂದ ದಾವಣಗೆರೆಗೆ ಪ್ರಯಾಣ ಬೆಳೆಸಿದ್ದರು ಎಂದು ಹೇಳಲಾಗಿದ್ದು, ಕಾರು ಕೆರೆಯ ಸಮೀಪ ಬಂದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ.

ಕಾರು ಕೆರೆಗೆ ಬಿದ್ದ ತಕ್ಷಣವೇ ಚಾಲಕ ಕಾರಿನಿಂದ ಜಿಗಿದು ಪಾರಾಗಿದ್ದಾನೆ. ಕಾರಿನ ಚಾಲಕ ಸಿಕ್ಕಿಲ್ಲ ಎಂದು ಹದಡಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.