SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಕುರಿಗಳಿಗೆ ನೀರು ಕುಡಿಸಿ ತಾವೇ ನೀರುಪಾಲಾದ ಸಹೋದರರು: ಓರ್ವನ ಶವ ಪತ್ತೆ, ಮತ್ತೊಬ್ಬನಿಗಾಗಿ ಶೋಧ

ಕುರಿಗಳಿಗೆ ನೀರು ಕುಡಿಸಿ ತಾವೇ ನೀರುಪಾಲಾದ ಸಹೋದರರು: ಓರ್ವನ ಶವ ಪತ್ತೆ, ಮತ್ತೊಬ್ಬನಿಗಾಗಿ ಶೋಧ

0
6

ದಾವಣಗೆರೆ: ಕುರಿಗಳಿಗೆ ನೀರು ಕುಡಿಸಲು ಕೆರೆಗೆ ತೆರಳಿದ್ದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆ ತಾಲೂಕಿನ ಹದಡಿ ಕೆರೆಯಲ್ಲಿ ನಡೆದಿದೆ.

ತಾಲೂಕಿನ ಬಟ್ಲಕಟ್ಟೆ ಗ್ರಾಮದ ಕುರಿಗಾಯಿಗಳಾದ ದೇವರಾಜ್ ಹಾಗೂ ಶಿವರಾಜ್ ಮೃತಪಟ್ಟ ದುರ್ದೈವಿಗಳು. ಗುರುವಾರ ಮಧ್ಯಾಹ್ನ ಕುರಿಗಳಿಗೆ ಹದಡಿ ಕೆರೆಯಲ್ಲಿ ನೀರು ಕುಡಿಸಿದ ಬಳಿಕ ಮೈ ತೊಳೆಯಲು ಸಹೋದರರಿಬ್ಬರು ಕೆರೆಗೆ ಇಳಿದಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯಲ್ಲಿದ್ದ ಆಳವಾದ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹದಡಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ದೇವರಾಜ್ ಅವರ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಮತ್ತೊಬ್ಬ ಸಹೋದರ ಶಿವರಾಜ್ ಅವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಘಟನೆಯಿಂದ ಬಟ್ಲಕಟ್ಟೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.