ಮಳವಳ್ಳಿ: ಬೃಹತಾಕಾರದ ಹೆಬ್ಬಾವೊಂದು ಜಿಂಕೆಯನ್ನು ನುಂಗಿ ಚಲಿಸಲು ಸಾಧ್ಯವಾಗದ ಅಪರೂಪದ ಘಟನೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಬಳಿ ನಡೆದಿದೆ.
ನೆಟ್ಕಲ್ ಗ್ರಾಮದ ಬೆಂಗಳೂರು ಜಲಮಂಡಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ನ ಕಾಡಿನ ಸಮೀಪ ಪತ್ತೆಯಾಗಿದೆ. ಈ ದೃಶ್ಯವನ್ನು ನೋಡಲು ಆ ಭಾಗದಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತರು ಮುಗಿಬಿದ್ದಿದ್ದು ಅಲ್ಲದೆ ಈ ದೃಶ್ಯ ನೋಡಿ ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಭಯಬೀತರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹೆಬ್ಬಾವು ಸಂರಕ್ಷಣೆ ಮಾಡಿ ಅರಣ್ಯ ಪ್ರದೇಶ ಬಿಡಲಾಯಿತು ಎಂದು ತಿಳಿದು ಬಂದಿದೆ.






















