ನೈಋತ್ಯ ರೈಲ್ವೆಯು ಕಾರ್ಯಾಚರಣಾ ಕಾರಣಗಳಿಂದ ತಿರುಪತಿ-ಹುಬ್ಬಳ್ಳಿ ಸೇರಿದಂತೆ 8 ದೈನಂದಿನ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ.
ಹುಬ್ಬಳ್ಳಿ: ನೈಋತ್ಯ ರೈಲ್ವೆಯು ಕಾರ್ಯಾಚರಣಾ ಕಾರಣಗಳಿಂದ ಹಲವು ದೈನಂದಿನ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ. ಈ ಕುರಿತು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕಣಮಡಿ ಪ್ರಕಟಣೆ ಹೊರಡಿಸಿದ್ದಾರೆ.
ಪ್ರಯಾಣಿಕರು ತಮ್ಮ ಪ್ರಯಾಣದ ದಿನಾಂಕಗಳನ್ನು ಪರಿಶೀಲಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ: SBI ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಇಲ್ಲ – ಮುಷ್ಕರ ಮುಂದೂಡಿಕೆ
ತಿರುಪತಿ – ಹುಬ್ಬಳ್ಳಿ ಮಾರ್ಗ: 57401 ತಿರುಪತಿ – ಹುಬ್ಬಳ್ಳಿ ಪ್ಯಾಸೆಂಜರ್ ರೈಲು – ಮೇ 23, 24, 30 ಮತ್ತು 31 ರಂದು ರದ್ದು, 57402 ಹುಬ್ಬಳ್ಳಿ – ತಿರುಪತಿ ಪ್ಯಾಸೆಂಜರ್ ರೈಲು, ಮೇ 24, 25, 31 ಹಾಗೂ ಜೂನ್ 1 ರಂದು ರದ್ದು.
ಗುಂತಕಲ್ – ಚಿಕ್ಕಜಾಜೂರು ಮಾರ್ಗ: 57415 ಗುಂತಕಲ್ – ಚಿಕ್ಕಜಾಜೂರು ಪ್ಯಾಸೆಂಜರ್ ರೈಲು – ಮೇ 24, 25, 30 ಮತ್ತು 31 ರಂದು ರದ್ದು, 57416 ಚಿಕ್ಕಜಾಜೂರು – ಗುಂತಕಲ್ ಪ್ಯಾಸೆಂಜರ್ ರೈಲು, ಮೇ 24, 25, 30 ಮತ್ತು 31 ರಂದು ರದ್ದು.
ಗುಂತಕಲ್ – ಹಿಂದೂಪುರ ಮಾರ್ಗ : 77213 ಗುಂತಕಲ್ – ಹಿಂದೂಪುರ DEMU ರೈಲು – ಮೇ 23, 24, 30 ಮತ್ತು 31 ರಂದು ರದ್ದು, 77214 ಹಿಂದೂಪುರ – ಗುಂತಕಲ್ DEMU ರೈಲು, ಮೇ 24, 25, 31 ಹಾಗೂ ಜೂನ್ 1 ರಂದು ರದ್ದು.
ಇದನ್ನೂ ಓದಿ: Online ಬುಕಿಂಗ್: ಹೆಚ್ಚುವರಿ ರದ್ದತಿ ಶುಲ್ಕ? CCPAಗೆ ತನಿಖೆ ಆದೇಶ
ಬೆಂಗಳೂರು – ಅನಂತಪುರ ಮಾರ್ಗ: 66559 ಕೆಎಸ್‌ಆರ್ ಬೆಂಗಳೂರು – ಅನಂತಪುರ MEMU ರೈಲು, ಮೇ 23, 24, 30 ಮತ್ತು 31 ರಂದು ರದ್ದು, 66560 ಅನಂತಪುರ – ಕೆಎಸ್‌ಆರ್ ಬೆಂಗಳೂರು MEMU ರೈಲು, ಮೇ 23, 24, 30 ಮತ್ತು 31 ರಂದು ರದ್ದು.
ಪ್ರಯಾಣಿಕರಿಗೆ ಸೂಚನೆ: ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ, ಪ್ರಯಾಣಿಕರು ರೈಲು ಸಂಚಾರದ ವಿವರಗಳನ್ನು ಮುಂಚಿತವಾಗಿ ಪರಿಶೀಲಿಸಿಕೊಳ್ಳುವಂತೆ ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ರೈಲ್ವೆ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಈ ತಾತ್ಕಾಲಿಕ ರದ್ದತಿಯಿಂದ ದೈನಂದಿನ ಪ್ರಯಾಣಿಕರು ಮತ್ತು ಉದ್ಯೋಗ ನಿಮಿತ್ತ ಸಂಚರಿಸುವವರಿಗೆ ಕೆಲವು ಮಟ್ಟಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಪರ್ಯಾಯ ರೈಲು ಅಥವಾ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.






















