SK Home Ad
Home ಕ್ರೀಡೆ IPL 2026: ಕುಸಿದ ಪಂಜಾಬ್‌ಗೆ ಶೆಡ್ಜ್ ಆಸರೆ, ಜಿಟಿಗೆ 164 ಗುರಿ

IPL 2026: ಕುಸಿದ ಪಂಜಾಬ್‌ಗೆ ಶೆಡ್ಜ್ ಆಸರೆ, ಜಿಟಿಗೆ 164 ಗುರಿ

0
223

ಅಹಮದಾಬಾದ್‌: ಸೂರ್ಯಾಂಶ್‌ ಶೆಡ್ಜ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಆಸರೆಯಿಂದಾಗಿ ಪಂಜಾಬ್‌ ಕಿಂಗ್ಸ್‌ ತಂಡ ಗುಜರಾತ್‌ ಟೈಟನ್ಸ್‌ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿದೆ.

ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಪಂಜಾಬ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಿತು.

ಮೊದಲೇ ಫೀಲ್ಡಿಂಗ್‌ ಆಯ್ದುಕೊಂಡ ಗುಜರಾತ್‌ ಟೈಟನ್ಸ್‌ ಲೆಕ್ಕಾಚಾರದಂತೆ ಆರಂಭದಲ್ಲಿಯೇ ಪಂಜಾಬ್‌ ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕಿತು.

ಇನ್ನಿಂಗ್ಸ್‌ ಆರಂಭದ ಮೊದಲ ಓವರ್‌ನಲ್ಲಿಯೇ ಪ್ರಿಯಾಂಶ್ ಆರ್ಯ (2), ಕೂಪರ್ ಕೊನೊಲಿ (0) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಪಂಜಾಬ್‌ ಸಿಲುಕಿತು.

8.4 ಓವರ್‌ ಆಗುವಷ್ಟರಲ್ಲಿಯೇ 47 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಹೀನಾಯ ಪತನ ಕಾಣುವ ಪರಿಸ್ಥಿತಿ ತಲುಪಿದ್ದ ತಂಡಕ್ಕೆ ಶೆಡ್ಜ್ ಮತ್ತು ಸ್ಟೊಯಿನಿಸ್ ಆಸರೆಯಾದರು.

6 ವಿಕೆಟ್‌ಗೆ 79 ರನ್‌ಗಳ ಜತೆಯಾಟ ನಡೆಸಿದ ಈ ಜೋಡಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಸೂರ್ಯಾಂಶ್‌ ಶೆಡ್ಜ್ ಕೇವಲ 29 ಎಸೆತದಲ್ಲಿ 57 ರನ್‌ ಸಿಡಿಸಿ ಆರ್ಭಟಿಸುತ್ತಿರುವಾಗ ಕಗಿಸೊ ರಬಾಡ, ಶೆಡ್ಜ್‌ ಆಟಕ್ಕೆ ಪೂರ್ಣವಿರಾಮ ಇಡುವಲ್ಲಿ ಯಶ ಕಂಡರು.

ಶೆಡ್ಜ್‌ ಹಿಂದೆಯೇ ಸ್ಟೊಯಿನಿಸ್ ಕೂಡ 40 ರನ್‌ಗಳಿಸಿ ಹೊರನಡೆದರು. ಬಳಿಕ ಜೇವಿಯರ್ ಬಾರ್ಟ್ಲೆಟ್ ಮೊದಲ ಎಸೆತದಲ್ಲಿಯೇ ಬೋಲ್ಡ್‌ ಆದರು. ಈ ಮೂಲಕ ಜೇಸನ್ ಹೋಲ್ಡರ್ ತಮ್ಮ ಕೊನೆಯ ಓವರ್‌ನಲ್ಲಿ ಎರಡು ವಿಕೆಟ್‌ ಉರುಳಿಸಿದರು.