ನವದೆಹಲಿ: ಟಿ20 ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಭಾರತ ನಮೀಬಿಯಾ ವಿರುದ್ಧ 93 ರನ್‌ಗಳ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ನಮೀಬಿಯಾ ಆರಂಭದಲ್ಲಿ ಶಾಕ್ ನೀಡಿತು. ಬ್ಯಾಟಿಂಗ್ ಮಾಡಲು ಬಂದ ಇಶನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ 24 ರನ್‌ಗಳಿಗೆ ಬೇರ್ಪಟ್ಟಿತು. ಒತ್ತಡ ಹೆಗಲೇರಿಸಿಕೊಂಡು ಬಂದ ಸಂಜು ಸ್ಯಾಮ್ಸನ್ ಎದುರಿಸಿದ್ದು ಕೇವಲ 8 ಎಸೆತಗಳನ್ನಾದರೂ 1 ಬೌಂಡರಿ, 3 ಸಿಕ್ಸರ್ ಸಮೇತ 22 ರನ್‌ಗಳಿಸಿ ಮಿಂಚಿದರೂ. ಆದ್ರೆ ಮತ್ತೊಂದು ಸಿಕ್ಸರ್ ಬಾರಿಸುವ ನಿಟ್ಟಿನಲ್ಲಿ ಸ್ಟೀನ್‌ಕ್ಯಾಂಪ್‌ಗೆ ಕ್ಯಾಚ್ ನೀಡಿ ಹೊರ ನಡೆದರು.
ಆದರೂ, ಪವರ್‌ಪ್ಲೇನಲ್ಲಿ ಇಶನ್ ಕಿಶನ್ ಪವರ್‌ಫುಲ್ ಬ್ಯಾಟಿಂಗ್‌ನಿಂದ ಭಾರತ ವೇಗವಾಗಿಯೇ ನೂರರ ಗಡಿಯತ್ತ ಸಾಗಿತು. ಕೇವಲ 20 ಎಸೆತಗಳಲ್ಲಿ ಇಶನ್ ಕಿಶನ್ ಅರ್ಧಶತಕ ಪೂರೈಸಿ ಸಂಭ್ರಮಿಸಿದರೆ, ಭಾರತ 6 ಓವರ್‌ಗಳಲ್ಲಿ 86 ರನ್ ಕಲೆ ಹಾಕಿತು.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಷರತ್ತು ಬದ್ಧ ಅನುಮತಿ
ಪವರ್‌ಪ್ಲೇ ಓವರ್‌ಗಳು ಅಂತ್ಯವಾಗುತ್ತಿದ್ದಂತೆ, ಭಾರತ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಕೇವಲ 24 ಎಸೆತಗಳಲ್ಲಿ 61 ರನ್‌ಗಳಿಸಿ ಇಶನ್ ಔಟಾದರೆ, ನಾಯಕ ಸೂರ್ಯಕುಮಾರ್ 12 ರನ್ ಗಳಿಸಿ ಹಿಂದಿರುಗಿದರು. ಇದಾದ ಬೆನ್ನಲ್ಲೆ 25 ರನ್‌ಗಳಿಸಿದ್ದ ತಿಲಕ್ ವರ್ಮಾ ಕೂಡ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಕೂಡ 23 ರನ್‌ಗಳ ಸಾಧಾರಣ ಕಾಣಿಕೆ ನೀಡಿದರು.
ಭಾರತ ಇನ್ನೂರರ ಗಡಿ ದಾಟಲು ನೆರವಾಗಿದ್ದೇ ಹಾರ್ದಿಕ್ ಪಾಂಡ್ಯ. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ ಪಾಂಡ್ಯ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ, ಸ್ಲಾಗ್ ಓವರ್‌ಗಳಲ್ಲಿ ನಮೀಬಿಯಾ ಬಹಳಷ್ಟು ಯಾರ್ಕರ್‌ಗಳನ್ನು ಎಸೆದು ರನ್ ವೇಗಕ್ಕೆ ಕಡಿವಾಣ ಹಾಕಿತು. ಅದರಲ್ಲೂ 20ನೇ ಓವರ್‌ನಲ್ಲಿ ಕೇವಲ 3 ರನ್‌ಗಳಷ್ಟೇ ನಮೀಬಿಯಾ ನೀಡಿತು.
ಇದನ್ನೂ ಓದಿ: ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಸಚಿವ ಸಂಪುಟ ನಿರ್ಣಯ
4 ರನ್‌ಗೆ ಬಿತ್ತು 5 ವಿಕೆಟ್: ಭಾರತ ಸ್ಲಾಗ್ ಓವರ್‌ಗಳಲ್ಲಿ ರನ್‌ಗಳನ್ನು ಗಳಿಸಲು ಪರದಾಟ ನಡೆಸಿತು. ಅಂತಿಮ 5 ಓವರ್‌ಗಳಲ್ಲಿ ಭಾರತ ಕೇವಲ 41 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. 205ರ ಮೊತ್ತಕ್ಕೆ 5ನೇ ವಿಕೆಟ್ ಕಳೆದುಕೊಂಡ ಭಾರತ 209 ರನ್‌ಗಳಿಗೆ 9ನೇ ವಿಕೆಟ್ ಕಳೆದುಕೊಂಡಿತು. ಇದರಿಂದ, ಕೇವಲ 4 ರನ್‌ಗಳ ಅಂತರದಲ್ಲಿ 5 ವಿಕೆಟ್ ಉರುಳಿದ್ದು ಆಘಾತಕಾರಿ.
210ರನ್‌ಗಳ ಗುರಿ ಬೆನ್ನಟ್ಟಿದ ನಮೀಬಿಯಾ ಉತ್ತಮ ಆರಂಭ ಕಂಡರೂ ನಂತರ ಯಾವುದೇ ಆಟಗಾರರ ಕ್ರಿಸ್‌ನಲ್ಲಿ ನಿಲ್ಲದಿರುವುದು ತಂಡದ ಸೋಲಿಗೆ ಕಾರಣವಾಯಿತು. ನಮೀಬಿಯಾ ಕೇವಲ 30 ರನ್‌ಗಳ ಅಂತರದಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು ಅಂತಿಮವಾಗಿ 93 ರನ್‌ಗಳಿಂದ ಸೋಲುಂಡಿತು.























