SK Home Ad
Home ಕ್ರೀಡೆ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ: ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ: ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ

0
11

ದೋಹಾ: ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಇಂದು ಮುಖಾಮುಖಿಯಾಗಿವೆ. ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಎ ತಂಡ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತ ಎ ತಂಡವನ್ನು ತಿಲಕ್ ವರ್ಮಾ ಮುನ್ನಡೆಸುತ್ತಿದ್ದು, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಆಯುಷ್ ಬದೋನಿ, ಕುಮಾರ್ ಕುಶಾಗ್ರ, ರಿಂಕು ಸಿಂಗ್ ಸೇರಿದಂತೆ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ.

ಬಿ ಗುಂಪಿನಲ್ಲಿರುವ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಒಂದು ಗೆಲುವಿನೊಂದಿಗೆ ತಲಾ ಎರಡು ಅಂಕಗಳನ್ನು ಪಡೆದಿದ್ದು, ರನ್‌ರೇಟ್ ಆಧಾರದಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಎರಡನೇ ಸ್ಥಾನವನ್ನು ಪಡೆದಿದೆ.

ಭಾರತ ಎ ತಂಡ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಆಯುಷ್ ಬದೋನಿ, ತಿಲಕ್ ವರ್ಮಾ (ನಾಯಕ), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ರಿಂಕು ಸಿಂಗ್, ಸೂರ್ಯನ್ಶ್ ಶೆಡ್ಗೆ, ಶಹಬಾಜ್ ಅಹ್ಮದ್, ವಿಪ್ರಜ್ ನಿಗಮ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್.

ಪಾಕಿಸ್ತಾನ ಎ ತಂಡ: ಶಮಿಲ್ ಹುಸೇನ್, ಮಾಜ್ ಸದಾಕತ್, ರೋಹೈಲ್ ನಜೀರ್ (ವಿಕೆಟ್ ಕೀಪರ್), ಹಸನ್ ನವಾಜ್, ಅಬ್ದುಲ್ ಸಮದ್ (ನಾಯಕ), ಫರ್ಹಾನ್ ಯೂಸಫ್, ಸಾದ್ ಮಸೂದ್, ಮೊಹಮ್ಮದ್ ಇಮ್ರಾನ್ ರಂಧಾವಾ, ಅಹ್ಮದ್ ದನಿಯಾಲ್, ಸುಫ್ಯಾನ್ ಮೊಕೀಮ್, ಅಲಿ ರಝಾ.