Home Advertisement
Home ನಮ್ಮ ಜಿಲ್ಲೆ ಧಾರವಾಡ ಶವ ಸುತ್ತಿ ಕೊಡಲು ಲಂಚ: ಕೆಎಂಸಿಆರ್‌ಐನ ಮೂವರು ಸಿಬ್ಬಂದಿ ವಜಾ

ಶವ ಸುತ್ತಿ ಕೊಡಲು ಲಂಚ: ಕೆಎಂಸಿಆರ್‌ಐನ ಮೂವರು ಸಿಬ್ಬಂದಿ ವಜಾ

0
30

ಹುಬ್ಬಳ್ಳಿ: ಶವ ಸುತ್ತಿ ಕೊಡಲು ಲಂಚ ಕೇಳಿದ್ದ ಕೆಎಂಸಿಆರ್‌ಐನ ಹೊರಗುತ್ತಿಗೆಯ ಮೂವರು ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ್ ಹೊಸಮನಿ ಅವರು ವಜಾ ಮಾಡಿ ಆದೇಶ ಮಾಡಿದ್ದಾರೆ.

ರಾಯಚೂರು ಮೂಲದ ಮಹಿಳೆ ಚಿಕಿತ್ಸೆ ಫಲಿಸದೇ ಕಳೆದ ದಿನ ಮೃತಪಟ್ಟಿದ್ದಳು. ಮೃತ ಮಹಿಳೆ ಶವ ಸುತ್ತಿ ಕೊಡಲು ಸಿಬ್ಬಂದಿ ಹಣ ಕೇಳಿದ್ದರು.‌ಹೀಗಾಗಿ ನಿರ್ದೇಶಕರು ಪರಿಶೀಲನೆ ಸೂಚಿಸಿದ್ದರು.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಷರತ್ತು ಬದ್ಧ ಅನುಮತಿ

ವಿಚಾರಣೆ ವೇಳೆ ಮೂವರು ಹಣ ಕೇಳಿರುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮೂವರನ್ನು ವಜಾ ಮಾಡಲಾಗಿದೆ. ಮೂವರು ಸಿಬ್ಬಂದಿ ಮೃತ ಮಹಿಳೆ ಶವ ಸುತ್ತಿ ಕೊಡಲು‌ ಹಣ‌ ಕೇಳಿರುವುದಾಗಿ ಸುದ್ದಿಯಾದ ಕೂಡಲೇ ಹಿರಿಯ ಅಧಿಕಾರಿಗಳ ತಂಡದಿಂದ ಪರಿಶೀಲನೆ ಮಾಡಲಾಯಿತು.

ಈ ವೇಳೆ ಸಿಬ್ಬಂದಿ ತಪ್ಪು ಒಪ್ಪಿಕೊಂಡಿದ್ದು, ವಜಾ ಮಾಡಲಾಗಿದೆ. ರೋಗಿಗಳು ಮತ್ತು ಸಂಬಂಧಿಗಳಿಂದ ಹಣ ಪಡೆಯದಂತೆ‌ ಖಡಕ್ ವಾರ್ನಿಂಗ್ ನೀಡಲಾಗಿದೆ ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ್ ಹೊಸಮನಿ ತಿಳಿಸಿದ್ದಾರೆ.

Previous articleಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಸಚಿವ ಸಂಪುಟ ನಿರ್ಣಯ
Next articleಅಹಮದಾಬಾದ್‌ ಏರ್ ಇಂಡಿಯಾ ವಿಮಾನ ದುರಂತ ಉದ್ದೇಶಪೂರ್ವಕ!