Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿಯಲ್ಲಿ ಖಾದಿ ಉಡುಪು ಖರೀದಿಗೆ ತಾತ್ಕಾಲಿಕ ಮಳಿಗೆ

ದಾಂಡೇಲಿಯಲ್ಲಿ ಖಾದಿ ಉಡುಪು ಖರೀದಿಗೆ ತಾತ್ಕಾಲಿಕ ಮಳಿಗೆ

0
231

ಸರ್ಕಾರಿ ನೌಕರರಿಂದ ಉತ್ಸಾಹಭರಿತ ಸ್ಪಂದನೆ: “ಸ್ವಯಂ ಪ್ರೇರಣೆಯಿಂದ” ಖಾದಿ ಉಡುಪು ಧರಿಸುವಂತೆ ಸೂಚನೆ

ದಾಂಡೇಲಿ (ಉತ್ತರ ಕನ್ನಡ): ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆಯಂತೆ, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳು, ನಿಗಮಗಳು, ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಅಧಿಕಾರಿಗಳು ಮತ್ತು ನೌಕರರು ಪ್ರತೀ ತಿಂಗಳ ಮೊದಲ ಶನಿವಾರದಂದು “ಸ್ವಯಂ ಪ್ರೇರಣೆಯಿಂದ” ಖಾದಿ ಉಡುಪು ಧರಿಸುವಂತೆ ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ನೌಕರರಿಗೆ ಖಾದಿ ಉಡುಪುಗಳನ್ನು ಸುಲಭವಾಗಿ ಖರೀದಿಸಲು ಅನುಕೂಲವಾಗುವಂತೆ, ಹುಬ್ಬಳ್ಳಿಯ ಖಾದಿ ಹುಟ್ಟುವಳಿ ಕೇಂದ್ರದಿಂದ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ತಾತ್ಕಾಲಿಕ ಖಾದಿ ಮಳಿಗೆಯನ್ನು ತೆರೆಯಲಾಯಿತು.

ಇದನ್ನೂ ಓದಿ:  ರಾಫ್ಟಿಂಗ್ ವಿವಾದ: ಖಾಸಗಿ, ಜಂಗಲ್ ಲಾಡ್ಜ್ ನಡುವೆ ಸಂಘರ್ಷ – ಪ್ರವಾಸೋದ್ಯಮಕ್ಕೆ ಆತಂಕ

ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಅವರು ಮಳಿಗೆಗೆ ಭೇಟಿ ನೀಡಿ, ಸಂಕೇತಿಕವಾಗಿ ಸರ್ಕಾರಿ ನೌಕರರಿಗೆ ಖಾದಿ ಉಡುಪುಗಳನ್ನು ವಿತರಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಖಾದಿ ಬಳಕೆಯಿಂದ ದೇಶೀಯ ಉತ್ಪನ್ನಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ, ಗ್ರಾಮೀಣ ಉದ್ಯೋಗ ಸೃಷ್ಟಿಗೂ ಸಹಕಾರಿಯಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಈ ಮಳಿಗೆಗೆ ಭೇಟಿ ನೀಡಿ, ಅತ್ಯಂತ ಉತ್ಸಾಹದಿಂದ ಖಾದಿ ಉಡುಪುಗಳನ್ನು ಖರೀದಿಸಿದರು. ಖಾದಿಯ ಮಹತ್ವ ಹಾಗೂ ಸ್ವದೇಶಿ ಉತ್ಪನ್ನಗಳ ಬಳಕೆಯ ಬಗ್ಗೆ ನೌಕರರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ.

ಇದನ್ನೂ ಓದಿ:  ಶಾಸಕ ಸತೀಶ್ ಸೈಲ್‌ಗೆ ಲಿವರ್ ಕಸಿಗಾಗಿ ವೈದ್ಯಕೀಯ ಜಾಮೀನು ಮಂಜೂರು

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವ ನಾಯ್ಕ, ಉಪಾಧ್ಯಕ್ಷ ರಮೇಶ್ ನಾಯ್ಕ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ತಾತ್ಕಾಲಿಕ ಖಾದಿ ಮಳಿಗೆಯಿಂದ ಸರ್ಕಾರಿ ನೌಕರರಿಗೆ ಅನುಕೂಲವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Previous articleಯಾದಗಿರಿಯಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ಸ್ಥಾಪನೆ
Next articleಭಾರತ-ಯುಎಸ್ ಐತಿಹಾಸಿಕ ವ್ಯಾಪಾರ ಒಪ್ಪಂದದ ರಹಸ್ಯ!