Home Advertisement
Home ಸಿನಿ ಮಿಲ್ಸ್ ಕಲ್ಟ್ ಸಿನಿಮಾ ಬಿಡುಗಡೆಗೆ ಭರ್ಜರಿ ತಯಾರಿ

ಕಲ್ಟ್ ಸಿನಿಮಾ ಬಿಡುಗಡೆಗೆ ಭರ್ಜರಿ ತಯಾರಿ

0
105

ಚಿತ್ರದುರ್ಗಕ್ಕೆ ಡಿಸೆಂಬರ್ 30 ರಂದು ಚಿತ್ರತಂಡ ಭೇಟಿ

ಬನಾರಸ್ ಖ್ಯಾತಿಯ ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ ಕಲ್ಟ್ ಚಿತ್ರ ಬಿಡುಗಡೆಯ ಸನಿಹದಲ್ಲಿದೆ. ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ, ಗಣರಾಜ್ಯೋತ್ಸವದ ಅಂಗವಾಗಿ ಜನವರಿ 23ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ, ಇದೀಗ ರಾಜ್ಯದ ವಿವಿಧ ಸ್ಥಳಗಳಲ್ಲಿ ’ಕರ್ನಾಟಕ ಕಲ್ಟ್ ಪ್ರವಾಸ’ ಎಂಬ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಆ ಪೈಕಿ ಮೊದಲಿಗೆ ಚಿತ್ರದುರ್ಗಕ್ಕೆ ಭೇಟಿ ನೀಡಲಿದೆ ’ಕಲ್ಟ್’ ಟೀಂ. ಡಿಸೆಂಬರ್ 30 ರಂದು ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲೆ (ಪಿ.ಇ.ಎಸ್ ಮೈದಾನ) ಆವರಣದಲ್ಲಿ ಜರುಗಲಿದೆ. ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ, ನಿರ್ದೇಶಕ ಅನಿಲ್ ಕುಮಾರ್ ಈ ಕಾರ್ಯಕ್ರಮದಲ್ಲಿ ಹಾಜರಿ ಹಾಕಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರಾದ ಚಂದನ್ ಶೆಟ್ಟಿ ಮತ್ತು ಆಲ್ ಓಕೆ (ಅಲೋಕ್) ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಬಳಿಕ ಜನವರಿ 4ರಂದು ದಾವಣಗೆರೆಗೆ ಭೇಟಿ ನೀಡಲಿದೆ. ದಾವಣಗೆರೆಯ ಹೈಸ್ಕೂಲ್ ಮೈದಾನದ ಆವರಣದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು, ಅದೇ ವೇದಿಕೆಯಲ್ಲಿ ಝೈದ್ ಖಾನ್, ರಚಿತಾ ರಾಮ್ ನಟಿಸಿರುವ ಮೆಲೋಡಿ ಹಾಡು ಬಿಡುಗಡೆ ಆಗಲಿದೆ. ಚಿತ್ರತಂಡದ ಹಾಗೂ ಬೆಣ್ಣೆ ನಗರಿಯ ಜನರೆದುರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ (ಅಲೋಕ್) ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

‘ಆರಂಭದಿಂದಲೂ ಕಲ್ಟ್ ಸಿನಿಮಾಕ್ಕೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಹಾಡುಗಳನ್ನು ಕೇಳಿದವರು ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ಕರ್ನಾಟಕದ ಸಾಕಷ್ಟು ಊರುಗಳಿಗೆ ನಮ್ಮ ತಂಡ ಭೇಟಿ ನೀಡಿದೆ. ಎಲ್ಲಾ ಕಡೆಯಿಂದಲೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇದೊಂದು ಅಪರೂಪದ ಲವ್ ಸ್ಟೋರಿ. ಈಗಿನ ಟ್ರೆಂಡ್‌ಗೆ ಹೊಂದುವಂತೆ ಸಿನಿಮಾ ಮಾಡಿದ ಖುಷಿಯಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಖಂಡಿತಾ ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆಯಿದೆ’ ಎನ್ನುತ್ತಾರೆ ನಟ ಝೈದ್ ಖಾನ್.

ಅಯ್ಯೋ ಶಿವನೇ, ಬ್ಲಡಿ ಲವ್ ಹಾಗೂ ನಿನ್ನಲ್ಲೇ ನಾನಿರೇ… ಎಂಬ ಹಾಡುಗಳು ಈಗಾಗಲೇ ಹಿಟ್ ಲಿಸ್ಟ್ ಸೇರಿವೆ. ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿರುವ ಈ ಚಿತ್ರದ ಮತ್ತೊಂದು ಹಾಡು ಜ. 4ರಂದು ದಾವಣಗೆರೆಯಲ್ಲಿ ಅನಾವರಣಗೊಳ್ಳಲಿದೆ. ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಕಲ್ಟ್ ಸಿನಿಮಾ ಅರ್ಪಿಸುತ್ತಿದೆ.

Previous articleಡ್ರಗ್ಸ್ ಮಾಫಿಯಾ ಪ್ರಕರಣ: ತಲೆಮರೆಸಿಕೊಂಡಿದ್ದ ನಾಲ್ವರ ಬಂಧನ
Next articleಮಂತ್ರಾಲಯದ ಶ್ರೀರಾಯರ ಹುಂಡಿಗೆ 3.73 ಕೋಟಿ ಕಾಣಿಕೆ ಸಂಗ್ರಹ