SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ 13: ಸ್ಪರ್ಧಿಗಳ ಉದ್ಧಟತನಕ್ಕೆ ಸುದೀಪ್ ಗರಂ; ‘ಮನೆ ಬಿಟ್ಟು ಹೋಗಿ’ ಎಂದು ಖಡಕ್...

ಬಿಗ್ ಬಾಸ್ 13: ಸ್ಪರ್ಧಿಗಳ ಉದ್ಧಟತನಕ್ಕೆ ಸುದೀಪ್ ಗರಂ; ‘ಮನೆ ಬಿಟ್ಟು ಹೋಗಿ’ ಎಂದು ಖಡಕ್ ಎಚ್ಚರಿಕೆ!

0
37

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಈ ವಾರದ ಎಪಿಸೋಡ್‌ಗಳು ತೀವ್ರ ಗೊಂದಲ ಮತ್ತು ಜಗಳಗಳಿಗೆ ಸಾಕ್ಷಿಯಾಗಿದ್ದವು. ನಿಯಮಗಳ ಉಲ್ಲಂಘನೆ, ಟಾಸ್ಕ್ ರದ್ದು, ಕೀಳು ಮಟ್ಟದ ಭಾಷಾ ಬಳಕೆ ಹಾಗೂ ಕ್ಯಾಪ್ಟನ್ಸಿ ಸ್ಪರ್ಧೆ ಮುರಿದುಬಿದ್ದ ಹಿನ್ನೆಲೆಯಲ್ಲಿ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ನಟ ಸುದೀಪ್ ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಿಶೇಷವಾಗಿ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ತಾಳ್ಮೆಗೇಡಿನ ವರ್ತನೆ ಸುದೀಪ್ ಅವರ ಕೋಪಕ್ಕೆ ಕಾರಣವಾಯಿತು. ನಾಮಿನೇಷನ್ ವಿಚಾರಣೆಯ ಸಂದರ್ಭದಲ್ಲಿ ಗಾನವಿ ಇತರರಿಗೆ ಮಾತನಾಡಲು ಅವಕಾಶ ನೀಡದೆ, ಕಟುಕಟೆಯಲ್ಲೇ ಕಾವ್ಯಾ ಜೊತೆ ಜಗಳಕ್ಕೆ ಬಿದ್ದರು. ಇದರಿಂದ ತೀವ್ರ ಬೇಸರಗೊಂಡ ಸುದೀಪ್, “ನೀವೇ ಮಾತನಾಡಿಕೊಳ್ಳಿ” ಎಂದು ಹೇಳಿ ವೇದಿಕೆಯಿಂದ ಹೊರನಡೆದರು. ನಂತರ ಸ್ಪರ್ಧಿಗಳು ಕ್ಷಮೆ ಕೇಳಿದ ಬಳಿಕ ಅವರು ವೇದಿಕೆಗೆ ಹಿಂತಿರುಗಿದರು.

ಅಷ್ಟೇ ಅಲ್ಲದೇ.. ಸುದೀಪ್, “ತಾಳ್ಮೆ ಇಲ್ಲದಿದ್ದರೆ ಯಾರಾದರೂ ಸರಿ ತಕ್ಷಣ ಮನೆಗೆ ಹೋಗಬಹುದು. ನೀವ್ಯಾರೂ ಇಲ್ಲದಿದ್ದರೂ ನಾನು ವೇದಿಕೆಗೆ ಬಂದು ಡ್ಯಾನ್ಸ್, ಹಾಡಿನ ಮೂಲಕ ಜನರನ್ನು ರಂಜಿಸಿ ಶೋ ಮುಗಿಸುತ್ತೇನೆ” ಎಂದು ಖಡಕ್ ಆಗಿ ಎಚ್ಚರಿಸಿದರು. ಗಾನವಿ, ಮಂಜ ಹಾಗೂ ಲಿಖಿತ್ ಅವರ ವಿತಂಡ ವಾದವನ್ನು ಟೀಕಿಸಿದ ಅವರು, ಶೋ ಗೌರವ ಕಾಪಾಡುವಂತೆ ಎಚ್ಚರಿಕೆ ನೀಡಿದರು.