SK Home Ad
Home ನಮ್ಮ ಜಿಲ್ಲೆ BBK13 ಕಳಪೆ: “ನೀವ್ಯಾರೂ ಇಲ್ಲದಿದ್ದರೂ, ನಾನು ಡ್ಯಾನ್ಸ್‌ ಮಾಡಿ ರಂಜಿಸ್ತೀನಿ”; ಕಿಚ್ಚ ಗರಂ

BBK13 ಕಳಪೆ: “ನೀವ್ಯಾರೂ ಇಲ್ಲದಿದ್ದರೂ, ನಾನು ಡ್ಯಾನ್ಸ್‌ ಮಾಡಿ ರಂಜಿಸ್ತೀನಿ”; ಕಿಚ್ಚ ಗರಂ

0
29

BBK13: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 13 ವೀಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಈ ಬಾರಿಯ ಸೀಸನ್ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿಂದಿನ ಸೀಸನ್‌ಗಳ ಗಿಲ್ಲಿ, ಪ್ರಥಮ್ ಹಾಗೂ ಪ್ರಶಾಂತ್ ಸಂಬರಗಿ ಅವರಂತಹ ಸ್ಪರ್ಧಿಗಳ ಆಟಕ್ಕೆ ಹೋಲಿಸಿದರೆ, ಪ್ರಸ್ತುತ ಸೀಸನ್‌ನ ಸ್ಪರ್ಧಿಗಳು ಕೇವಲ ವೈಯಕ್ತಿಕ ದಾಳಿ ಮತ್ತು ಬೋರಿಂಗ್ ಜಗಳಗಳಲ್ಲೇ ಸಮಯ ಕಳೆಯುತ್ತಿದ್ದಾರೆ. ಇರೋದ್ರಲ್ಲಿ ಆಸಿಯಾ, ಗಗನ್ ಹಾಗೂ ಮಂಜು ಆಟ ಕೊಂಚ ಪರವಾಗಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.

ಇತ್ತೀಚಿನ ‘ವಾರದ ಪಂಚಾಯ್ತಿ’ ಸಂಚಿಕೆಯಲ್ಲಿ ಸ್ಪರ್ಧಿಗಳ ಕಳಪೆ ಪ್ರದರ್ಶನ ಮತ್ತು ಬೇಜವಾಬ್ದಾರಿ ವರ್ತನೆ ಕಂಡು ನಿರೂಪಕ ಕಿಚ್ಚ ಸುದೀಪ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಶೋನಲ್ಲಿ ಯಾರೂ ಒಬ್ಬರಿಗೊಬ್ಬರು ಗೌರವ ನೀಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಸುದೀಪ್, “ನನಗೆ ನನ್ನ ಮೇಲೆ ನನಗೆ ಗೌರವವಿದೆ” ಎಂದು ಕಟುವಾಗಿ ಹೇಳಿ ಕ್ಷಣಕಾಲ ವೇದಿಕೆಯಿಂದ ಹೊರನಡೆದ ಪ್ರಸಂಗವೂ ನಡೆಯಿತು. ನಂತರ ಮರಳಿ ಬಂದ ಅವರು, ಸ್ಪರ್ಧಿಗಳ ನಿರಾಸಕ್ತಿ ಆಟದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದರು.

ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗಾನವಿ, ಪ್ರಶಾಂತ್ ಮತ್ತು ಸೋನಿಕಾ ಅವರ ಶೋ ಉದ್ದೇಶವನ್ನು ಪ್ರಶ್ನಿಸಿದ ಅವರು, ಲಿಖಿತ್ ಹಾಗೂ ಮಂಜು ಅವರ ಟಾಸ್ಕ್ ವೈಫಲ್ಯದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದರು. “ನೀವು ಯಾರೂ ಹೊರಗಡೆ ಚೆನ್ನಾಗಿ ಕಾಣಿಸುತ್ತಿಲ್ಲ. ನೀವು ಇಲ್ಲದಿದ್ದರೂ ನಾನು ಶನಿವಾರ-ಭಾನುವಾರ ವೀಕ್ಷಕರಿಗೆ ಮನರಂಜನೆ ನೀಡಬಲ್ಲೆ” ಎಂದು ನೇರವಾಗಿಯೇ ಟಾಂಗ್ ನೀಡಿದರು.

ಒಟ್ಟಾರೆಯಾಗಿ.. ನಿನ್ನೆಯ ಸಂಚಿಕೆಯಲ್ಲಿ ನಡೆದ ಘಟನೆಯನ್ನು ಗಮನಿಸಿದಾಗ, ಸ್ಪರ್ಧಿಗಳ ಈ ನೀರಸ ಆಟದಿಂದಾಗಿ ಕಾರ್ಯಕ್ರಮದ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ ಹಾಗೇ ಬಿಗ್‌ ಬಾಸ್‌ನ ಅಭಿಮಾನಿಗಳಿಗೆ ತುಂಬಾ ಬೇಸರ ವ್ಯಕ್ತ ಪಡಿಸುತ್ತಿರಬಹುದು. ಇದೇ ಕಾರಣಕ್ಕೆ ಸುದೀಪ್ ವೇದಿಕೆಯಲ್ಲಿ ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.