SK Home Ad
Home ನಮ್ಮ ಜಿಲ್ಲೆ ಕಲಬುರಗಿ 21 ದಿನಗಳ ಗಣೇಶೋತ್ಸವ: ಶ್ರೀಕಾಂತ ಶೆಟ್ಟಿಗೆ ಕಲಬುರಗಿ ಪ್ರವೇಶಕ್ಕೆ ಬ್ರೇಕ್‌

21 ದಿನಗಳ ಗಣೇಶೋತ್ಸವ: ಶ್ರೀಕಾಂತ ಶೆಟ್ಟಿಗೆ ಕಲಬುರಗಿ ಪ್ರವೇಶಕ್ಕೆ ಬ್ರೇಕ್‌

0
16

ಕಲಬುರಗಿ: ನಗರದ ಬಹುಮನಿ ಕೋಟೆ ಎದುರು ಹಿಂದೂ ಮಹಾಗಣಪತಿ ಸಮಿತಿಯಿಂದ ಪ್ರತಿಷ್ಠಾಪಿಸಲಾದ 21 ದಿನಗಳ ಗಣೇಶೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಕಾಂತ ಶೆಟ್ಟಿ ಕಾರ್ಕಳ ಅವರನ್ನು ಕಲಬುರಗಿ ನಗರ ಪ್ರವೇಶಿಸಲು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಕಳೆದ ಸೆ. 30 ರಿಂದ ಅಕ್ಟೋಬರ್ 4 ವರೆಗೆ ನಗರ ಪ್ರವೇಶಿಸದಂತೆ ಕಲಬುರಗಿ ಉಪ ಪೊಲೀಸ್ ಆಯುಕ್ತರು ಹಾಗೂ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶಿಸಿದ್ದು, ಅ. 1 ರಂದು ನಡೆಯುವ ಕಾರ್ಯಕ್ರಮಕ್ಕೆ ಶ್ರೀಕಾಂತ ಶೆಟ್ಟಿ ಮುಖ್ಯ ಭಾಷಣಕಾರರಾಗಿ ಆಗಮಿಸುವ ಮುನ್ಸೂಚನೆ ಇತ್ತು. ಆದರೆ ನಗರದಲ್ಲಿ ಗಣೇಶೋತ್ಸವ ಸೇರಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥಾ ಕಾಪಾಡುವ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.