SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಚಿತ್ರದುರ್ಗ: ಒಳಮೀಸಲಾತಿಗೆ ಹೆಚ್ಚು ಸಹಾಯ ಮಾಡಿದವರು ಬಿ.ಎಸ್.ವೈ – ಮಾದಾರ ಚನ್ನಯ್ಯ ಶ್ರೀ

ಚಿತ್ರದುರ್ಗ: ಒಳಮೀಸಲಾತಿಗೆ ಹೆಚ್ಚು ಸಹಾಯ ಮಾಡಿದವರು ಬಿ.ಎಸ್.ವೈ – ಮಾದಾರ ಚನ್ನಯ್ಯ ಶ್ರೀ

0
48

ಚಿತ್ರದುರ್ಗ: ಒಳಮೀಸಲಾತಿಗೆ ಹೆಚ್ಚು ಸಹಾಯ ಮಾಡಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಂದು ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಹೇಳಿದರು.

ನಗರದಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿ ಅವರು ಕೆಲಸ ಮಾಡಿದ್ದಾರೆ. “ಜೇನು ಕಚ್ಚಿದರೂ 101 ಸಮಾಜಕ್ಕೆ ನ್ಯಾಯ ಕೊಡುತ್ತೇನೆ ಎಂದು ಕೆಲಸ ಮಾಡಿದವರು ಬೊಮ್ಮಾಯಿ” ಎಂದು ಶ್ಲಾಘಿಸಿದರು.

“ಶೋಷಿತ ಸಮುದಾಯದ ಮಠಗಳಿಗೆ ಅನುದಾನ ನೀಡಿದ್ದು ಬಿ.ಎಸ್.ವೈ. ಶೆಡ್‌ನಲ್ಲಿದ್ದ ಮಠಗಳಿಗೆ ಅನುದಾನ ನೀಡಿದ್ದರು. ಬೊಮ್ಮಾಯಿ ಅವರೂ ಮಠಗಳಿಗೆ ಅನುದಾನ ನೀಡಿದ್ದರು. ಬೊಮ್ಮಾಯಿ, ವಿಜಯೇಂದ್ರ ಇಬ್ಬರೂ ಸಮಾಜದ ಪರವಾಗಿ ಗಟ್ಟಿಯಾಗಿ ಮಾತನಾಡುತ್ತಾರೆ. ಗಟ್ಟಿಯಾಗಿ ಮಾತಾಡಬೇಕು ಎಂದು ಪ್ರೀತಿ, ಕಾಳಜಿಯಿಂದ ಬೊಮ್ಮಾಯಿ ನಮಗೆ ಹೇಳುತ್ತಾರೆ” ಎಂದು ತಿಳಿಸಿದರು.

“ಸ್ಮಶಾನಕ್ಕೂ ಜಾಗ ಇಲ್ಲದ ಸಂದರ್ಭದಲ್ಲಿ ನಮ್ಮ ಸಮಾಜದ ದೊಡ್ಡ ಮಠ ಕಟ್ಟಬೇಕು ಎಂಬ ಕನಸಿತ್ತು. ಭೂಮಿ ಪೂಜೆಯನ್ನು ನಾನೇ ಮಾಡಬೇಕೆಂಬ ಬಯಕೆ ಬೊಮ್ಮಾಯಿ ಅವರಿಗಿತ್ತು. ನಮ್ಮ ಮಠಕ್ಕೆ ಎಂಬತ್ತು ಎಕರೆ ಜಮೀನು ನೀಡಿದವರು ಬೊಮ್ಮಾಯಿ. ಚಿತ್ರದುರ್ಗದ ಮುರುಘಾಮಠ ನಮಗೆ ದೀಕ್ಷೆ ನೀಡಿದೆ, ಜಾಗ ನೀಡಿದೆ” ಎಂದು ಮಾದಾರ ಚನ್ನಯ್ಯ ಶ್ರೀ ಸ್ಮರಿಸಿದರು.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.