SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಘಟಿಕೋತ್ಸವದಲ್ಲಿ ಪೂರ್ತಿ ‘ವಂದೇ ಮಾತರಂ’ ಹಾಡಲು ಸೂಚನೆ

ಘಟಿಕೋತ್ಸವದಲ್ಲಿ ಪೂರ್ತಿ ‘ವಂದೇ ಮಾತರಂ’ ಹಾಡಲು ಸೂಚನೆ

0
20

ಬೆಳಗಾವಿ: ಸೆ. 26ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಘಟಿಕೋತ್ಸವ ನಡೆಯಲಿದ್ದು, ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂರ್ಣಪ್ರಮಾಣದ ‘ವಂದೇ ಮಾತರಂ’ ಗೀತೆ ಪ್ರಸ್ತುತಪಡಿಸಲು ಆಡಳಿತಾತ್ಮಕ ಸೂಚನೆ ನೀಡಲಾಗಿದೆ.

ರಾಜ್ಯಪಾಲ ಹಾಗೂ ವಿಟಿಯು ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ಈ ಕುರಿತು ಸೂಚನೆ ಬಂದಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌. ವಿದ್ಯಾಶಂಕರ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3 ನಿಮಿಷ 10 ಸೆಕೆಂಡ್‌ಗಳ ಅವಧಿಯ ಪೂರ್ಣಪ್ರಮಾಣದ ‘ವಂದೇ ಮಾತರಂ’ ಗೀತೆಯನ್ನು ಘಟಿಕೋತ್ಸವದ ಉದ್ಘಾಟನಾ ಹಂತದಲ್ಲಿಯೇ ಪ್ರಸ್ತುತಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಆದರೆ, ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಕುಲಪತಿ ನಿರಾಕರಿಸಿದರು. ಸೆ. 26ರಂದು ಬೆಳಗಾವಿಯ ವಿಟಿಯು ಕ್ಯಾಂಪಸ್‌ನಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ.