SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್‌ನಲ್ಲಿ ರಾದ್ಧಾಂತ: ಪಾತ್ರೆ ತೊಳೆಯದ ಲಿಖಿತ್ ವಿರುದ್ಧ ಕೆಂಡವಾದ ಕ್ಯಾಪ್ಟನ್ ಸಂಗೀತಾ!

ಬಿಗ್ ಬಾಸ್‌ನಲ್ಲಿ ರಾದ್ಧಾಂತ: ಪಾತ್ರೆ ತೊಳೆಯದ ಲಿಖಿತ್ ವಿರುದ್ಧ ಕೆಂಡವಾದ ಕ್ಯಾಪ್ಟನ್ ಸಂಗೀತಾ!

0
18

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಕಾದಾಟ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಸದ್ಯ ಕಿಚನ್ ಕೆಲಸ ಹಾಗೂ ನೈರ್ಮಲ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾಪ್ಟನ್ ಸಂಗೀತಾ ಭಟ್ ಹಾಗೂ ಸ್ಪರ್ಧಿ ಲಿಖಿತ್ ನಡುವೆ ತೀವ್ರ ಸ್ವರೂಪದ ವಾಕ್ಸಮರ ನಡೆದಿದೆ.

ಅರ್ಧರಾತ್ರಿ ಕೆಲ ಸ್ಪರ್ಧಿಗಳು ಅಡುಗೆ ಮನೆಯಲ್ಲಿ ಆಲೂಗಡ್ಡೆ ಚಿಪ್ಸ್ ತಯಾರಿಸಿ ತಿಂದ ನಂತರ, ಬಳಸಿದ ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೆಯೇ ಬಿಟ್ಟು ಕಿಚನ್ ಕಟ್ಟೆಯನ್ನು ಅಸ್ತವ್ಯಸ್ತವಾಗಿ ಹಾಕಿದ್ದರು. ಬೆಳಿಗ್ಗೆ ಇದನ್ನು ಗಮನಿಸಿದ ಕ್ಯಾಪ್ಟನ್ ಸಂಗೀತಾ, ಅಡುಗೆ ಮನೆಯ ನೈರ್ಮಲ್ಯ ಕಾಪಾಡದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇದಕ್ಕೆ ಲಿಖಿತ್ ಕಾರಣ ಎಂದು ನೇರವಾಗಿ ಕ್ಯಾಪ್ಟನ್‌ ಆರೋಪಿಸಿದ್ದಾರೆ.

ಆದ್ರೆ ಸಂಗೀತಾ ಈ ಆರೋಪವನ್ನು ಲಿಖಿತ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ಚಿಪ್ಸ್ ತಯಾರಿಕೆಯಲ್ಲಿ ಸಾಕಷ್ಟು ಜನರಿದ್ದರು ಮತ್ತು ನಾನು ಬೇಗನೆ ಮಲಗಿದ್ದೆ. ಆದ್ರೂ ಸಂಗೀತಾ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಅವರಲ್ಲಿ ನನ್ನ ಮೇಲೆ ವೈಯಕ್ತಿಕ ದ್ವೇಷವಿದ್ದು, ಅದನ್ನು ತೀರಿಸಿಕೊಳ್ಳಲು ಈ ರೀತಿ ಕಿರಿಕ್ ಮಾಡುತ್ತಿದ್ದಾರೆ” ಎಂದು ಲಿಖಿತ್‌ ತಿರುಗೇಟು ನೀಡಿದರು.

ಲಿಖಿತ್ ಈ ವಾದದಿಂದ ಮತ್ತಷ್ಟು ಕೆರಳಿದ ಸಂಗೀತಾ, “ಅವರ ಹೆತ್ತವರಿಗೇ ಲಿಖಿತ್‌ನ ಸರಿ ಮಾಡಲು ಸಾಧ್ಯವಾಗಿಲ್ಲ ಎಂದ ಮೇಲೆ, ನನ್ನಿಂದ ಅವರನ್ನು ತಿದ್ದಲು ಹೇಗೆ ಸಾಧ್ಯ?” ಎಂದು ಕಟುವಾಗಿ ಆಕ್ರೋಶ ಹೊರಹಾಕಿದರು. ಅಗ್ನಿಪರೀಕ್ಷೆ ಹಂತದಿಂದ ಬಂದಿರುವ ಲಿಖಿತ್ ಹಾಗೂ ಸಂಗೀತಾ ನಡುವೆ ಮೊದಲಿನಿಂದಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದು, ಈ ಘಟನೆಯಿಂದಾಗಿ ಇಬ್ಬರ ಮಧ್ಯ ವೈಷಮ್ಯ ಮತ್ತಷ್ಟು ತಾರಕಕ್ಕೇರಿದೆ.