SK Home Ad
Home ನಮ್ಮ ಜಿಲ್ಲೆ ಕಲಬುರಗಿ ಗುಡುಗು-ಮಿಂಚಿನ ಅಬ್ಬರ: ಸಿಡಿಲು ಬಡಿದು ಮೂವರು ಸಾವು

ಗುಡುಗು-ಮಿಂಚಿನ ಅಬ್ಬರ: ಸಿಡಿಲು ಬಡಿದು ಮೂವರು ಸಾವು

0
96

ಕಲಬುರಗಿ: ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಹೊರ ವಲಯದಲ್ಲಿರುವ ಜಮೀನೊಂದರಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ಬಸಯ್ಯಾ ಗುತ್ತೇದಾರ ಅವರ ಹೊಲದಲ್ಲಿ ಭಾರಿ ಗುಡುಗು ಮಿಂಚಿನ ರಭಸಕ್ಕೆ ಶೈಜಾದ್‌ಬಿ ಫತ್ರುಸಾಬ್ (58) ಮತ್ತು ಲಕ್ಷ್ಮಿ ಬಸ್ಸಯ್ಯಾ ಗುತ್ತೇದಾರ (45) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕಂದಾಯ ನಿರೀಕ್ಷೆಕ ಆನಂದ ನರಾಳೆ, ಗ್ರಾಮ ಆಡಳಿತಧಿಕಾರಿ ಬಸವರಾಜ್ ಮಾಳಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಶ್ರೀರಂಗಪುರ ಗ್ರಾಮದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೇದಾರಪ್ಪ ಮಲ್ಲಪ್ಪ ಗುರ್ಲಹೊಸೂರ (47) ಮೃತಪಟ್ಟಿದ್ದು, ಭೀಮಪ್ಪ (45) ಎನ್ನುವವರು ಗಾಯಗೊಂಡಿದ್ದಾರೆ.