SK Home Ad
Home ನಮ್ಮ ಜಿಲ್ಲೆ ಧಾರವಾಡ ಸೆ. 1ರಂದು `ಚುನಾವಣಾ ಆಯೋಗ ಚಲೋ’ ಬೃಹತ್ ಪ್ರತಿಭಟನೆ

ಸೆ. 1ರಂದು `ಚುನಾವಣಾ ಆಯೋಗ ಚಲೋ’ ಬೃಹತ್ ಪ್ರತಿಭಟನೆ

0
71

ಧಾರವಾಡ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆಗಿರುವ ಲೋಪದೋಷ ಮತ್ತು ಸಮರ್ಪಕವಾಗಿ ಮಾಡುವಂತೆ ಆಗ್ರಹಿಸಿ ಸೆ. 1ರಂದು ಬೆಂಗಳೂರಿನಲ್ಲಿ `ಚುನಾವಣಾ ಆಯೋಗ ಚಲೋ’ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ನಟ, ನಿರ್ದೇಶಕ ಪ್ರಕಾಶರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ರಾಜ್ಯದಲ್ಲಿ ಚುನಾವಣೆ ನಡೆಯಲು ಇನ್ನೂ ಎರಡು ವರ್ಷಗಳು ಬಾಕಿ ಇವೆ. ಆದರೆ, ಕೇವಲ ಒಂದು, ಎರಡು ತಿಂಗಳ ಸಮಯಾವಕಾಶ ನೀಡಿ ಎಸ್‌ಐಆರ್ ಪ್ರಕ್ರಿಯೆಯನ್ನು ಮಾಡಲಾಗಿದ್ದು, ಇದರಿಂದ ಸಾಕಷ್ಟು ಅರ್ಹ ಮತದಾರರು ಪಟ್ಟಿಯಿಂದ ಕೈತಪ್ಪಿ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಐದೂವರೆ ಕೋಟಿ ಪ್ರಜೆಗಳಿದ್ದಾರೆ. ತರಾತುರಿಯಲ್ಲಿ ಎಸ್‌ಐಆರ್ ಮಾಡಿ ಲಕ್ಷಾಂತರ ಮತದಾರರ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ಇದರಿಂದ ಸರಿ ಸುಮಾರು 43 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳಿದುಕೊಳ್ಳುತ್ತಿದ್ದಾರೆ ಎಂದರು.

ಕೇಂದ್ರ ಚುನಾವಣಾ ಆಯೋಗವು ಪೂರ್ವ ಸಿದ್ಧತೆ ನಡೆಸದೇ ಕನಿಷ್ಠ 6 ತಿಂಗಳು ಕಾಲಾವಕಾಶ ಕೊಡದೇ ತರಾತುರಿಯಲ್ಲಿ ಮಾಡಿದ್ದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ರಾಜ್ಯ ಮುಖ್ಯ ಚುನಾವಣಾಧಿಕಾರಿಯಾಗಲಿ ಅಥವಾ ಬಿಎಲ್‌ಒಗಳ ವಿರುದ್ಧ ನಮ್ಮ ಹೋರಾಟವಲ್ಲ. ನಮ್ಮ ಹೋರಾಟ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಂದರು.