ವಿಕ್ರಮ್ ರವಿಚಂದ್ರನ್ ‘ಮುಧೋಳ’ಗೆ ಟೆಕ್ನಾಲಜಿ ಟಚ್; AI ಮೂಲಕ ಪಾತ್ರಗಳ ವಿಭಿನ್ನ ಅನಾವರಣ
ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ‘ಮುಧೋಳ’ ಚಿತ್ರತಂಡವು ಪ್ರಮೋಷನ್‌ನಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ಈ ಚಿತ್ರದ ಕ್ಯಾರೆಕ್ಟರ್ ಅನೌನ್ಸ್‌ಮೆಂಟ್ ವಿಡಿಯೋದಲ್ಲಿ AI-Generated Visuals ಬಳಕೆ ಮಾಡಲಾಗಿದ್ದು, ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಗ್ಯಾಂಗ್‌ಸ್ಟರ್ ಜಗತ್ತಿನ ಕ್ರೌರ್ಯ, ಅಧಿಕಾರ, ರಗಡ್‌ನೆಸ್ ಹಾಗೂ ಭೂಗತ ಲೋಕದ ವಾತಾವರಣವನ್ನು ಕಟ್ಟಿಕೊಡುವ ರೀತಿಯಲ್ಲಿ ವಿಡಿಯೋ ರೂಪಿಸಲಾಗಿದೆ. ಚಿತ್ರದಲ್ಲಿ ನಟಿಸಿರುವ ಕಲಾವಿದರ ಪಾತ್ರಗಳ ಪರಿಕಲ್ಪನೆಯನ್ನು ಆಧರಿಸಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ವಿಭಿನ್ನ ವಿಶುವಲ್ಸ್ ಸಿದ್ಧಪಡಿಸಲಾಗಿದೆ.
ಮಾಸ್ ಎಲಿಮೆಂಟ್ಸ್ ಮತ್ತು ಅನಿರೀಕ್ಷಿತ ತಿರುವುಗಳ ಸುಳಿವು ನೀಡುವ ಈ ಪಾತ್ರ ಪರಿಚಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, ‘ಮುಧೋಳ’ ಚಿತ್ರದ ಕಥೆ ಹಾಗೂ ಪಾತ್ರಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ಹಾಗೂ ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾರ್ತಿಕ್ ರಾಜನ್ ನಿರ್ದೇಶನದ ಚಿತ್ರಕ್ಕೆ ಯುವರಾಜ್ ಚಂದ್ರನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅಮೃತ ಸಿನಿಕ್ರಾಫ್ಸ್ ಸಂಸ್ಥೆಯಡಿ ಚಿತ್ರ ನಿರ್ಮಾಣವಾಗುತ್ತಿದೆ.
ಇದೇ ವೇಳೆ ಚಿತ್ರದ ಮೊದಲ ಹಾಡು ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಇದೇ ದಿನ ‘ಚಿಂಟು ಸನ್ ಆಫ್ ವಿಶಾಲಾಕ್ಷಿ’ ಚಿತ್ರದ ಫಸ್ಟ್ ಲುಕ್ ಕೂಡ ಅನಾವರಣಗೊಳ್ಳಲಿದೆ.
ಚಿತ್ರದ ಬಿಡುಗಡೆ ವಿಳಂಬವಾಗುತ್ತಿರುವ ಬಗ್ಗೆ ಮಾತನಾಡಿರುವ ವಿಕ್ರಮ್ ರವಿಚಂದ್ರನ್, ಸಿನಿಮಾ ಬಲವಾಗಿ ಮೂಡಿಬರಬೇಕು ಎಂಬ ಪ್ರಯತ್ನದಿಂದ ಸ್ವಲ್ಪ ತಡವಾಗಿದೆ ಎಂದು ಹೇಳಿದ್ದಾರೆ. “ನಿಯತ್ತಿಗೆ ಮತ್ತೊಂದು ಹೆಸರೇ ಮುಧೋಳ್” ಎಂದು ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.
AI ತಂತ್ರಜ್ಞಾನವನ್ನು ಪ್ರಮೋಷನ್‌ನ ಪ್ರಮುಖ ಭಾಗವನ್ನಾಗಿ ಮಾಡಿಕೊಂಡಿರುವ ‘ಮುಧೋಳ’ ಇದೀಗ ಚಿತ್ರದ ಕಥೆ, ಪಾತ್ರಗಳು ಮತ್ತು ಆಕ್ಷನ್ ಪ್ರಪಂಚದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.
AI ತಂತ್ರಜ್ಞಾನದ ಮೂಲಕ ‘ಮುಧೋಳ’ ಚಿತ್ರದ ಗ್ಯಾಂಗ್‌ಸ್ಟರ್‌ಗಳ ಪಾತ್ರ ಪರಿಚಯದ ವಿಡಿಯೋ






















