SK Home Ad
Home ಸಿನಿ ಮಿಲ್ಸ್ ಪವಿತ್ರ ಬಂಧನಕ್ಕೆ ಹೊಸ ಸಮಯ – ಇನ್ನು ಸಂಜೆ 6:30ಕ್ಕೆ!

ಪವಿತ್ರ ಬಂಧನಕ್ಕೆ ಹೊಸ ಸಮಯ – ಇನ್ನು ಸಂಜೆ 6:30ಕ್ಕೆ!

0
65

ಕನ್ನಡ ಕಿರುತೆರೆಯ ನೆಚ್ಚಿನ ಧಾರಾವಾಹಿ ಕಲರ್ಸ್ ಕನ್ನಡದ ‘ಪವಿತ್ರ ಬಂಧನ’ ಇದು ಸಂಬಂಧಗಳ ಸೂಕ್ಷ್ಮತೆ, ಪ್ರೀತಿ, ತ್ಯಾಗ ಮತ್ತು ಕುಟುಂಬದ ಭಾವನಾತ್ಮಕ ಸಂಘರ್ಷವನ್ನು ಕಟ್ಟಿಕೊಡುತ್ತಿರುವ ಮುದ್ದಾದ ಜೋಡಿಗಳ ಮತ್ತು ಕುಂಟುಂಬದ ಕಥೆಯನ್ನು ದಿನ ನಿತ್ಯ ನಿಮ್ಮ ಮುಂದೆ ಹೊತ್ತು ತರುತ್ತಿತ್ತು. ಹಾಗೇ ಇನ್ನು ಮುಂದೆ ಈ ಪವಿತ್ರ ಬಂಧನ ತಂಡ ನಿಮ್ಮನ್ನು ಮತ್ತು ನಿಮ್ಮವರನ್ನು ರಂಜಿಸಲು ಬದಲಾದ ಹೊಸ ಸಮಯದಲ್ಲಿ ಪ್ರಸಾರವಾಗಲಿದೆ.

ಹಾಗೇ ಇನ್ನು ಸೋಮವಾರದಿಂದ ಶುಕ್ರುವಾರದತನಕ ‘ಪವಿತ್ರ ಬಂಧನ’ ಪ್ರತಿದಿನ ಸಂಜೆ 6:30ಕ್ಕೆ ಪ್ರಸಾರವಾಗಲಿದೆ. ಹಾಗೇ ಈ ಬದಲಾದ ಸಮಯವನ್ನ ಪ್ರೀಯ ವೀಕ್ಷಕರು ಗಮನದಲ್ಲಿ ಇಟ್ಟುಕೊಂಡು ಪ್ರತಿ ದಿನ ಪವಿತ್ರ ಬಂಧನ ಕುಟುಂಬಕ್ಕೆ ಕೊಟುತ್ತಿದ್ದಂತ ಪ್ರೀತಿ, ವಿಶ್ವಾಸ ಹಾಗೂ ನಿಮ್ಮ ಅಮುಲ್ಯವಾದ ಸಮಯವನ್ನು ನೀಡಿ ಹರಸಿ.

ಪವಿತ್ರಾಳ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಆಕೆಯ ಜೀವನದ ದಿಕ್ಕನ್ನೇ ಬದಲಿಸುತ್ತವೆ. ಪ್ರೀತಿಯ ಕನಸುಗಳ ನಡುವೆ, ಪರಿಸ್ಥಿತಿಯ ಒತ್ತಡದಿಂದಾಗಿ ಆಕೆ ದೇವದತ್‌ನನ್ನು ಮದುವೆಯಾಗುವ ಅನಿವಾರ್ಯತೆಗೆ ಸಿಲುಕುತ್ತಾಳೆ.

ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಮುನ್ನವೇ ದಾಂಪತ್ಯದ ಬಂಧಕ್ಕೆ ಸಿಲುಕುವ ಪವಿತ್ರಾ ಮತ್ತು ದೇವದತ್‌ರ ಬದುಕು ಮುಂದೆ ಯಾವ ತಿರುವು ಪಡೆಯಲಿದೆ? ಈ ಅನಿರೀಕ್ಷಿತ ಬಂಧ ಪ್ರೀತಿಯಾಗಿ ಬದಲಾಗುತ್ತದೆಯೇ? ಅಥವಾ ಹಳೆಯ ಭಾವನೆಗಳು ಅವರ ಬದುಕಿನಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಲಿವೆಯೇ?

ಪವಿತ್ರಾ ಮತ್ತು ದೇವದತ್ ನಡುವಿನ ಸಂಬಂಧದ ಏರಿಳಿತಗಳು, ಕುಟುಂಬದ ಭಾವನೆಗಳು ಹಾಗೂ ವಿಧಿ ಅವರ ಬದುಕಿನಲ್ಲಿ ಬರೆಯುವ ಹೊಸ ಅಧ್ಯಾಯಗಳು ‘ಪವಿತ್ರ ಬಂಧನ’ವನ್ನು ಮತ್ತಷ್ಟು ಕುತೂಹಲಕರವಾಗಿಸಿವೆ.