SK Home Ad
Home ಸಿನಿ ಮಿಲ್ಸ್ ‘ಹನುಮಾನ್ ಅಂಶ’ ರಿಲೀಸ್ ಡೇಟ್ ಚೇಂಜ್

‘ಹನುಮಾನ್ ಅಂಶ’ ರಿಲೀಸ್ ಡೇಟ್ ಚೇಂಜ್

0
39

ಮುಂಬೈ: ಬಹುನಿರೀಕ್ಷಿತ ಪೌರಾಣಿಕ ಕಥಾಹಂದರದ ‘ಹನುಮಾನ್ ಅಂಶ’ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರವು ಈಗ 2026ರ ಆಗಸ್ಟ್ 7ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಚಿತ್ರವು ಈ ಹಿಂದೆ 2026ರ ಜುಲೈ 31 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರತಂಡವು ಚಿತ್ರದ ಬಿಡುಗಡೆಯನ್ನು ಕೆಲವೇ ದಿನಗಳ ಕಾಲ ಮುಂದೂಡಿದ್ದು, ಹೊಸ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ

ಚಿತ್ರದ ಬಿಡುಗಡೆ ದಿನಾಂಕದೊಂದಿಗೆ ಪರಿಷ್ಕೃತ ಟ್ರೇಲರ್‌ನ್ನೂ ಚಿತ್ರತಂಡ ಅನಾವರಣಗೊಳಿಸಿದೆ. ಪ್ರೇಕ್ಷಕರು ನಿರ್ದೇಶಕರು ಕಲ್ಪಿಸಿಕೊಂಡ ರೀತಿಯಲ್ಲೇ ಚಿತ್ರವನ್ನು ಅನುಭವಿಸುವಂತೆ ಮಾಡಲು ಕೆಲವು ಸಣ್ಣ ತಾಂತ್ರಿಕ ಮತ್ತು ನಿರೂಪಣಾ ಪರಿಷ್ಕರಣೆಗಳನ್ನು ಮಾಡಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಆಯ್ದ ಪ್ರದರ್ಶನಗಳಲ್ಲಿ ಉತ್ತಮ ಪ್ರತಿಕ್ರಿಯೆ : ಚಿತ್ರ ಬಿಡುಗಡೆಯ ಮುನ್ನ ಆಯ್ದ ಪ್ರದರ್ಶನಗಳನ್ನು (Preview Screenings) ಆಯೋಜಿಸಲಾಗಿದ್ದು, ಚಿತ್ರಕ್ಕೆ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಕಥೆ, ದೃಶ್ಯ ವೈಭವ ಹಾಗೂ ಭಾವನಾತ್ಮಕ ನಿರೂಪಣೆಗೆ ಸಿನಿ ವಲಯದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಣ್ಯರ ಬೆಂಬಲ : ‘ಹನುಮಾನ್ ಅಂಶ’ ಚಿತ್ರಕ್ಕೆ ಕನ್ನಡದ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ, ತೆಲುಗಿನ ನಟ ಆದಿವಿ ಶೇಷ್, ನಟಿ ಪ್ರಣಿತಾ ಸುಭಾಷ್, ನಿರ್ದೇಶಕ ಓಂ ರಾವತ್, ಖ್ಯಾತ ನಿರ್ಮಾಪಕ ಆನಂದ್ ಎಲ್. ರೈ, ನಿರ್ದೇಶಕ ಆನಂದ್ ತಿವಾರಿ, ಗೀತರಚನೆಕಾರ ಮನೋಜ್ ಮುಂತಶೀರ್, ನಟಿ ಮೀರಾ ಚೋಪ್ರಾ ಸೇರಿದಂತೆ ಹಲವು ಸಿನಿಮಾ ಗಣ್ಯರು ಶುಭ ಹಾರೈಸಿದ್ದು, ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಟ-ನಟಿಯರ ಬಳಗ : SWAMBHU Media Network ಸಂಸ್ಥೆಯ ಪ್ರಸ್ತುತಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶೋಭಿನಾವ್ ಸತ್ಯ, ವಿಹಾನ್ ಶೆಡ್ಜ್, ಚಂದನ್ ಕೆ. ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ ಹಾಗೂ ಗುಲ್ಶನ್ ಪಾಂಡೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರವನ್ನು ವಿಶಾಲ್ ಚತುರ್ವೇದಿ ಕಥೆ ಬರೆದು ನಿರ್ದೇಶಿಸಿದ್ದು, ರಾಗಿಣಿ ಎಸ್., ನಮ್ರತಾ ಜಿ. ಸಿಂಗ್, ಅನುಪ್ರಿಯಾ ಎ. ನಾಗರ್ ಹಾಗೂ ವಿಶಾಲ್ ಚತುರ್ವೇದಿ ನಿರ್ಮಾಣ ಮಾಡಿದ್ದಾರೆ.

ಸಂಗೀತ ಮತ್ತು ವಿತರಣೆ : ಚಿತ್ರದ ಸಂಗೀತವನ್ನು ಟೈಮ್ಸ್ ಮ್ಯೂಸಿಕ್ ಬಿಡುಗಡೆ ಮಾಡುತ್ತಿದ್ದು, ದೇಶಾದ್ಯಂತ ಸಿನೆಪೊಲಿಸ್ ಇಂಡಿಯಾ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಪೌರಾಣಿಕ ಕಥಾಹಂದರ, ಆಧುನಿಕ ತಾಂತ್ರಿಕ ನಿರೂಪಣೆ ಮತ್ತು ದೃಶ್ಯ ವೈಭವದೊಂದಿಗೆ ಮೂಡಿಬಂದಿರುವ ‘ಹನುಮಾನ್ ಅಂಶ’ ಚಿತ್ರದ ಬಗ್ಗೆ ಈಗಾಗಲೇ ಸಿನಿ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದ್ದು, ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ದೊರೆಯಲಿದೆ ಎಂಬ ಕುತೂಹಲ ಹೆಚ್ಚಿದೆ.

ಈ ಚಲನಚಿತ್ರವು ಕೇವಲ ಕಾಲ್ಪನಿಕ ಕಥೆಯಲ್ಲ, ಇದು ಆಧುನಿಕ ಭಾರತದ ಅತ್ಯಂತ ಪ್ರಭಾವಶಾಲಿ ಸಂತ ನೀಬ್ ಕರೋರಿ ಬಾಬಾ ಅವರ ಯೋಗ ಮತ್ತು ಆಧ್ಯಾತ್ಮಿಕ ಪಯಣವನ್ನು ಆಧರಿಸಿದೆ.

ಈ ಚಲನಚಿತ್ರವು ಒಬ್ಬ ಸಾಮಾನ್ಯ ಯುವಕ ಲಕ್ಷ್ಮಣ ನಾರಾಯಣ ಶರ್ಮಾ (ಬಾಬಾ ಅವರ ಪೂರ್ವಾಶ್ರಮದ ಹೆಸರು) ಹೇಗೆ ಎಲ್ಲವನ್ನೂ ತ್ಯಜಿಸಿ, ಹನುಮಂತನ ಪರಮ ಭಕ್ತನಾಗಿ, ಪವಾಡ ಪುರುಷನಾಗುತ್ತಾನೆ ಎಂಬುದನ್ನು ತೋರಿಸುತ್ತದೆ. “ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ, ದೇವರನ್ನು ಸ್ಮರಿಸಿ” ಎಂಬುದು ಚಿತ್ರದ ಮುಖ್ಯ ಸಂದೇಶವಾಗಿದೆ.

ಕಥಾಹಂದರ: ತಾಯಿಯ ಮರಣದ ನಂತರ ತೀವ್ರ ದುಃಖಕ್ಕೊಳಗಾಗುವ ಒಬ್ಬ ಹುಡುಗ, ದೇವರನ್ನು ಹುಡುಕುತ್ತಾ ಕಾಡು, ಮೇಡು, ನದಿ, ಗ್ರಾಮಗಳನ್ನು ಅಲೆಯುವ ಆಧ್ಯಾತ್ಮಿಕ ಪ್ರಯಾಣವೇ ಈ ಸಿನಿಮಾ. ಆತ ಮುಂದೆ ಪ್ರಪಂಚದಿಂದ ಓಡಿಹೋಗುವ ಬದಲು, ಜಗತ್ತಿನ ಸೇವೆಯಲ್ಲೇ ದೇವರನ್ನು ಕಾಣಬಹುದು ಎಂದು ಅರಿತುಕೊಂಡು ‘ನೀಬ್ ಕರೋರಿ ಬಾಬಾ’ ಆಗಿ ಬದಲಾಗುತ್ತಾನೆ.