SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ “ಸಿದ್ದರಾಮಯ್ಯನವರಿಗೆ ಕೈಕೊಟ್ಟಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಶಾಪ ತಟ್ಟಿದೆ”

“ಸಿದ್ದರಾಮಯ್ಯನವರಿಗೆ ಕೈಕೊಟ್ಟಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಶಾಪ ತಟ್ಟಿದೆ”

0
3

ಬಾಗಲಕೋಟೆ: ಸಿದ್ದರಾಮಯ್ಯನವರಿಗೆ ಕೈಕೊಟ್ಟಿರುವುದಕ್ಕಾಗಿಯೇ ಸಚಿವ ಸತೀಶ ಜಾರಕಿಹೊಳಿಗೆ ಶಾಪ ತಟ್ಟಿದೆ ಅಂತ ಅನಿಸುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸತೀಶ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿಯ ಹಿಂದೆ ಕಾಂಗ್ರೆಸ್ಸಿನವರ ಕೈವಾಡವಿದೆ. ಸತೀಶ ಜಾರಕಿಹೊಳಿ ಅವರು ಎರಡ್ಮೂರು ತಪ್ಪು ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಕೈಕೊಟ್ಟಿದ್ದಾರೆ. ಅವರು ಎಷ್ಟು ನಂಬಿದ್ದರೋ ಅಷ್ಟು ಕೈ ಕೊಟ್ಟಿದ್ದಾರೆ. ಜಾರಕಿಹೊಳಿ, ಎಂ.ಬಿ. ಪಾಟೀಲ, ಜಮೀರ್ ಅಹ್ಮದ್ ಮೂವರೂ ಕೈ ಕೊಟ್ಟರು. ಸಿದ್ದರಾಮಯ್ಯನವರನ್ನು ಕಳೆಗಿಳಿಸಿದರೆ ಏನೂ ಅಭ್ಯಂತರವಿಲ್ಲ ಎಂದು 36 ಶಾಸಕರ ಸಹಿ ಮಾಡಿಸಿ ಕೊಟ್ಟಿದ್ದೇ ಸತೀಶ ಜಾರಕಿಹೊಳಿ ಎಂದು ಸುದ್ದಿಗಾರರಿಗೆ ತಿಳಿಸಿದರು.

ಯಾವ ಕಾರಣಕ್ಕೆ ಸಿದ್ದರಾಮಯ್ಯನವರನ್ನು ಇಳಿಸಿದ್ದು ಎಂಬುದನ್ನು ಜನಕ್ಕೆ ತಿಳಿಸಬೇಕಿತ್ತಲ್ಲವೇ. ಹೈಕಮಾಂಡ್‌ಗೆ ಹಣ ನೀಡದಿರೋದಕ್ಕೆ ತೆಗೆದರಾ. ರಾಹುಲ್ ಗಾಂಧಿಯನ್ನೂ ಸಿದ್ದರಾಮಯ್ಯನವರು ಬಹಳ ನಂಬಿದ್ದರು. ನಾನು ನನ್ನ ಪುತ್ರನ ಮದುವೆ ಆಮಂತ್ರಣ ನೀಡಲು ತೆರಳಿದಾಗಲೂ ಸಿದ್ದರಾಮಯ್ಯನವರು ನೋ ಚೇಂಜ್ ಯತ್ನಾಳ, ರಾಹುಲ್ ಗಾಂಧಿ ಜತೆಗಿದ್ದಾರೆ ಎಂದಿದ್ದರು. ಈಗ ನೋಡಿ ಸಿದ್ದರಾಮಯ್ಯನವರ ಸ್ಥಿತಿ ಎಲ್ಲಿಗೆ ಬಂದಿದೆ. ಸಿದ್ದರಾಮಯ್ಯನವರಿಗೆ ಸತೀಶ ಉತ್ತರಾಧಿಕಾರಿ ಮಾಡಬೇಕೆಂಬುದಿತ್ತು. ಅವರು ಯಡಿಯೂರಪ್ಪನ ರೀತಿ ವಂಶಪಾರಂಪರೆ ಬೆಳೆಸೋರಲ್ಲ. ಅವರಿಗೆ ಸತೀಶ ಜಾರಕಿಹೊಳಿಯನ್ನು ಬೆಳೆಸೋದಿತ್ತು. ಹೀಗಾಗಿಯೇ ಶಾಪ ತಟ್ಟಿದೆ ಎಂದರು.