SK Home Ad
Home ಕ್ರೀಡೆ IPL 2026: ಸತತ ಸೋಲಿನಿಂದ ಹೊರಬರುವುದೇ ಪಂಜಾಬ್

IPL 2026: ಸತತ ಸೋಲಿನಿಂದ ಹೊರಬರುವುದೇ ಪಂಜಾಬ್

0
237

ಧರ್ಮಶಾಲಾ: ಐಪಿಎಲ್ ಪಂದ್ಯಾವಳಿಯ 58ನೇ ಪಂದ್ಯದಲ್ಲಿ ಗುರುವಾರ ಬಲಿಷ್ಠ ಪಂಜಾಬ್ ಕಿಂಗ್ಸ್ ಮತ್ತು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಕಾದಾಡಲಿವೆ.

ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಈ ಬಾರಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಆದರೆ, ಕಳೆದ ಸತತ ಸೋಲುಗಳಿಂದ ಇನ್ನೂ 13 ಅಂಕಗಳನ್ನಷ್ಟೇ ಪಡೆದುಕೊಂಡಿರುವ ಪಂಜಾಬ್, ಮತ್ತೆ ಪ್ಲೇಆಫ್ ರೇಸ್‌ನಲ್ಲಿ ಉಳಿಯಬೇಕಾದರೆ, ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ.

ಒಮ್ಮೆ ಸೋತು ಕೈ ಸುಟ್ಟುಕೊಂಡರೆ, ಪ್ಲೇಆಫ್ ರೇಸ್‌ನಲ್ಲಿ ಅನ್ಯ ತಂಡಗಳು ಪಂಜಾಬ್ ಸ್ಥಾನವನ್ನು ಆಕ್ರಮಿಸಬಹುದಾದ ಆತಂಕವಿದೆ. ಹಾಗಾಗಿ, ಪಂಜಾಬ್‌ಗೆ ಈ ಪಂದ್ಯ ನಿರ್ಣಾಯಕ ಎನ್ನಿಸಿಕೊಂಡಿದೆ.

ಆರಂಭಿಕರಾದ ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ತಂಡಕ್ಕೆ ಸ್ಫೋಟಕ ಆರಂಭ ನೀಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್ ಮತ್ತು ಕನ್ನಡಿಗ ವೈಶಾಖ್ ವಿಜಯ್‌ಕುಮಾರ್ ಎದುರಾಳಿಗಳಿಗೆ ಕಂಟಕವಾಗಿದ್ದಾರೆ.

ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ತಂಡ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಉಳಿದ ಪಂದ್ಯಗಳನ್ನು ಗೆದ್ದು ಗೌರವದ ವಿದಾಯ ಹೇಳುವ ಗುರಿ ಹೊಂದಿದೆ.

ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಬ್ಯಾಟಿಂಗ್ ಶಕ್ತಿ ತಂಡದ ಬಲವಾಗಿದೆ. ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಪಿಚ್ ವರದಿ ಪ್ರಕಾರ ಧರ್ಮಶಾಲಾದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಸಹಕಾರಿಯಾಗಿದೆ.

ಪಂದ್ಯ ಆರಂಭ: ರಾತ್ರಿ 7.30ಕ್ಕೆ