SK Home Ad
Home ಕ್ರೀಡೆ IPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ 211 ರನ್‌ ಟಾರ್ಗೆಟ್‌ ನೀಡಿದ ಪಂಜಾಬ್

IPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ 211 ರನ್‌ ಟಾರ್ಗೆಟ್‌ ನೀಡಿದ ಪಂಜಾಬ್

0
201

ಧರ್ಮಶಾಲಾ: ಪ್ರಿಯಾಂಶ್ ಆರ್ಯ ಮತ್ತು ಶ್ರೇಯಸ್‌ ಅಯ್ಯರ್‌ ಅರ್ಧಶತಕದ ನೆರವಿನಿಂದಾಗಿ ಪಂಜಾಬ್‌ ಕಿಂಗ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬೃಹತ್‌ ರನ್‌ ಕಲೆಹಾಕಿದೆ.

ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಪಂಜಾಬ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 210 ರನ್‌ ಗಳಿಸಿತು.

ಆರಂಭದಲ್ಲಿಯೇ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಪ್ರಿಯಾಂಶ್ ಆರ್ಯ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಪ್ರಭಸಿಮ್ರನ್ ಸಿಂಗ್ ಕೇವಲ 18 ರನ್‌ಗಳಿಗೆ ಆಟ ಮುಗಿಸಿದರು.

ಪ್ರಿಯಾಂಶ್ ಆರ್ಯ 33 ಎಸೆತದಲ್ಲಿ 2 ಬೌಂಡರಿ, 6 ಸಿಕ್ಸರ್‌ನಿಂದ 56 ರನ್‌ಗಳಿಸಿ ಮಾಧವ್ ತಿವಾರಿ ಎಸೆತದಲ್ಲಿ ಸಾಹಿಲ್ ಪರಾಖ್‌ಗೆ ಕ್ಯಾಚ್‌ ನೀಡಿ ಹೊರನಡೆದರು.

ಶ್ರೇಯಸ್‌ ಅಯ್ಯರ್‌ ಮತ್ತು ಕೂಪರ್ ಕೊನೊಲಿ‌ ಜೋಡಿ 83 ರನ್‌ಗಳ ಜತೆಯಾಟ ನಡೆಸಿ ತಂಡದ ಮೊತ್ತವನ್ನು 180ಕ್ಕೆ ತಂದರು. ಆಗ ಕೂಪರ್‌ (38) ಮಾಧವ್ ತಿವಾರಿ ವಿಕೆಟ್‌ ಒಪ್ಪಿಸಿದರು.

ಮಾರ್ಕಸ್ ಸ್ಟೊಯಿನಿಸ್ ಕೇವಲ 1 ರನ್‌ ಗಳಿಸಿ ಔಟಾದರೆ, ಶಶಾಂಕ್ ಸಿಂಗ್ ಖಾತೆ ತೆರೆಯದೆ ಮೊದಲ ಎಸೆತದಲ್ಲಿಯೇ ಬಲಿಯಾದರು.

ಶ್ರೇಯಸ್‌ ಅಯ್ಯರ್‌ 36 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ನಿಂದ 59 ರನ್‌ ಗಳಿಸಿ ಅಜೇಯರಾಗಿ ಉಳಿದರು. ಸೂರ್ಯಾಂಶ್ ಶೆಡ್ಜ್ ಕೇವಲ 8 ಎಸೆತದಲ್ಲಿ ಅಜೇಯ 21 ರನ್‌ಗಳಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಮಾರ್ಕಸ್ ಸ್ಟೊಯಿನಿಸ್, ಮಾಧವ್ ತಿವಾರಿ ತಲಾ ಎರಡು ವಿಕೆಟ್‌ ಪಡೆದರೆ, ಮುಖೇಶ್‌ ಕುಮಾರ ಒಂದು ವಿಕೆಟ್‌ ಪಡೆದರು.