SK Home Ad
Home ಕ್ರೀಡೆ IPL 2026: ಲಖನೌ ಬೌಲಿಂಗ್‌ ದಾಳಿಗೆ ಕುಸಿದ ಕೋಲ್ಕತ್ತಾ

IPL 2026: ಲಖನೌ ಬೌಲಿಂಗ್‌ ದಾಳಿಗೆ ಕುಸಿದ ಕೋಲ್ಕತ್ತಾ

0
120

ಲಖನೌ: ಲಖನೌ ಸೂಪರ್ ಜೈಂಟ್ಸ್‌ನ ಮೊಹ್ಸಿನ್ ಖಾನ್ ಮಾರಕ ಬೌಲಿಂಗ್‌ ದಾಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತತ್ತರಿಸಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿದ್ದ ಲಖನೌ ಲೆಕ್ಕಾಚಾರದಂತೆ ಕೋಲ್ಕತ್ತಾ ಬ್ಯಾಟರ್‌ಗಳನ್ನು ಕಟ್ಟಹಾಕುವಲ್ಲಿ ಯಶಸ್ವಿಯಾಗಿದೆ.

ಮೊಹ್ಸಿನ್ ಖಾನ್ ತಮ್ಮ ಮೊದಲ ಓವರ್‌ನಿಂದಲೇ ಕೋಲ್ಕತ್ತಾ ಬ್ಯಾಟರ್‌ಗಳನ್ನು ಕಾಡಲಾರಂಭಿಸಿದ್ದು, ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಟಿಮ್ ಸೀಫರ್ಟ್ ಅವರನ್ನು ಶೂನ್ಯಕ್ಕೆ ಔಟ್‌ ಮಾಡಿದರು.

ಮೊಹ್ಸಿನ್ ಎರಡನೇ ಓವರ್‌ನಲ್ಲಿ ಅಜಿಂಕ್ಯಾ ರಹಾನೆ (10) ವಿಕೆಟ್‌ ಪಡೆದರೆ, ಮೂರನೇ ಓವರ್‌ನಲ್ಲಿ ರೋವ್‌ಮನ್ ಪೊವೆಲ್ (1) ವಿಕೆಟ್‌ ಉರುಳಿಸಿದರು.

ಪ್ರತಿ ಓವರ್‌ನಲ್ಲಿಯೂ ವಿಕೆಟ್‌ ಪಡೆದಿದ್ದ ಮೊಹ್ಸಿನ್ ಖಾನ್ ತಮ್ಮ ಕೊನೆಯ ಓವರ್‌ನಲ್ಲಿಯೂ ಎರಡು ವಿಕೆಟ್‌ ಪಡೆದರು. 21 ಎಸೆತದಲ್ಲಿ 3 ಸಿಕ್ಸರ್‌ನಿಂದ 34 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕ್ಯಾಮರೂನ್ ಗ್ರೀನ್ ಮತ್ತು ಖಾತೆ ತೆರೆಯದೆ ಅನುಕೂಲ್ ರಾಯ್ ಮೊಹ್ಸಿನ್ ಖಾನ್‌ಗೆ ವಿಕೆಟ್‌ ಒಪ್ಪಿಸಿದರು.

ಕೊನೆಯಲ್ಲಿ ರಿಂಕು ಸಿಂಗ್‌ ತಂಡಕ್ಕೆ ಆಸರೆಯಾಗಿದ್ದು, 36 ಎಸೆತದಲ್ಲಿ 37 ರನ್‌ ಗಳಿಸಿ ಆಡುತ್ತಿದ್ದಾರೆ. ಸದ್ಯ ತಂಡದ ಮೊತ್ತ 17 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 105 ರನ್‌ ಆಗಿದೆ.