ಚಿತ್ರದುರ್ಗ: ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ ಮಾಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೋರಾಟಕ್ಕೆ ಖಾವಿ, ಖಾದಿ ಎಲ್ಲರೂ ಬೀದಿಗಿಳಿಯಬೇಕು ಎಂದು ಹೇಳಿದರು.
ನಟ ಕಿಚ್ಚ ಸುದೀಪ್ ಅವರು ಕೂಡ ಮೀಸಲಾತಿ ಹೋರಾಟಕ್ಕೆ ಬೀದಿಗಿಳಿಯಬೇಕು ಎಂದು ನಾನು ಹೇಳಿದ್ದೇನೆ, ಅದರಲ್ಲಿ ತಪ್ಪೇನಿದೆ ಎಂದು ಉಗ್ರಪ್ಪ ಪ್ರಶ್ನಿಸಿದರು. ಮಾಜಿ ಸಚಿವ ರಾಜೂಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದ ಉಗ್ರಪ್ಪ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವ ಪ್ರವೃತ್ತಿ ನನಗಿಲ್ಲಎಂದು ಟಾಂಗ್ ನೀಡಿದರು.
ನಾನು ಡಿಗ್ರಿ ಓದುವಾಗಲೇ ಹೋರಾಟದಿಂದ ಜೈಲು ಸೇರಿದ್ದೆ. ರಾಮಕೃಷ್ಣ ಹೆಗಡೆ, ದೇವೇಗೌಡ, ವಾಜಪೇಯಿ ಅವರೇ ನನ್ನ ಜೈಲ್ ಮೇಟ್ಸ್. ಹೆಗಡೆ ಅವರು ನನ್ನ ಜೈಲ್ ಮೇಟ್ ಆಗಿದ್ದರಿಂದ ನಾಯಕ ಸಮಾಜಕ್ಕೆ 1991ರಲ್ಲಿ ಎಸ್‌ಟಿ ಮೀಸಲಾತಿಗೆ ಶಿಫಾರಸು ಮಾಡಿಸಿದೆವು. ಕಾಶ್ಮೀರದ ಗುಜ್ಜಾರ್ ಮತ್ತು ರಾಜ್ಯದ ನಾಯಕ ಸಮಾಜಕ್ಕೆ ಪರ್ಯಾಯ ಪದ ಸೇರ್ಪಡೆ ಮಾಡಿಸಿದೆವು ಎಂದು ಹೇಳಿದರು.
ವಿಧಾನಸೌಧದ (ಶಕ್ತಿ ಸೌಧ) ಮುಂದೆ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಿದ್ದೇವೆ. ಅದನ್ನು ನಾವು ಸ್ವಂತ ಖರ್ಚಿನಲ್ಲಿ ಮಾಡಿದ್ದೇವೆ. ಅದಕ್ಕೆ ರಾಜೂಗೌಡ ಒಂದು ಪೈಸೆ ಕೊಟ್ಟಿದ್ದಾನಾ ಎಂದು ಉಗ್ರಪ್ಪ ಕಿಡಿಕಾರಿದರು.
- ಕಡೂರು: ಕುರುಬರಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ – ಗ್ರಾಮಸ್ಥರು ನಿರಾಳ
- ಸುದೀಪ್ ಬೀದಿಗಿಳಿಯಬೇಕು ಎಂದಿದ್ದರಲ್ಲಿ ತಪ್ಪೇನಿದೆ?, ರಾಜುಗೌಡ ಗುಬ್ಬಿ ಇದ್ದಂತೆ
- ಉತ್ತರ ಕನ್ನಡ ಜಿಲ್ಲೆಯ ಮತದಾರರ ಪಟ್ಟಿ ಪ್ರಕಟ: 11.39 ಲಕ್ಷ ಮತದಾರರು
- ‘ಅವೆಂಜರ್ಸ್: ಡೂಮ್ಸ್ಡೇ’ ಭಾರತದಲ್ಲಿ ಬಿಡುಗಡೆ ದಿನಾಂಕ ಫಿಕ್ಸ್
- ಹೊಸಪೇಟೆಯಲ್ಲಿ ಅ. 31ರಿಂದ 19ನೇ ಶ್ರೀ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ






















